ಆಪತ್ಕಾಲಕ್ಕೆ ಆಗಮಿಸಿದ ‘ಶೌರ್ಯ ‘ವಿಪತ್ತು ನಿರ್ವಹಣಾ ತಂಡ

0

ಆ.1.ರಂದು ಮಧ್ಯಾಹ್ನ ಬಳಿಕ ರಣಭೀಕರ ಮಳೆಗೆ ಕಲ್ಮಕಾರು , ಕೊಲ್ಲಮೊಗ್ರ, ಹರಿಹರ ಮೊದಲಾದ ಪ್ರದೇಶಗಳಲ್ಲಿ ಬಹಳಷ್ಟು ಅವಾಂತರಗಳು ಸೃಷ್ಟಿಯಾಗಿತ್ತು.ಈ ಆಪತ್ ಕಾಲಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರು ಆಗಮಿಸಿ ನಿರಂತರ ಸೇವೆ ನೀಡಿ ಸಂಕಷ್ಟ ಸಿಲುಕಿ ದವರಿಗೆ
ನೆರವಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

 

 

ವಿಪತ್ತು ನಿರ್ವಹಣಾ ಘಟಕ 6 ಘಟಕದ ಸದಸ್ಯರು ತುರ್ತು ಸೇವೆಗೆ ಆಗಮಿಸಿದರು.ಸುಬ್ರಹ್ಮಣ್ಯ, ನಾಲ್ಕೂರು, ದೊಡ್ಡತೋಟ ,ಸುಳ್ಯ, ಗುತ್ತಿಗಾರು,ಪಂಜ ಘಟಕದ ಸದಸ್ಯರು ಸ್ವಯಂ ಸೇವಕರಾಗಿ
ಸೇವೆ ಸಲ್ಲಿಸಿರುತ್ತಾರೆ.ವಿಶೇಷವಾಗಿ ಪ್ರವಾಹ ಪೀಡಿತ ಮನೆಗಳಿಗೆ ತೆರಳಿ ಆ ಮನೆಗಳ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಾಟ,ಬಿದ್ದ ಮನೆಗಳ ಹಂಚು ,ಮರ ಮಟ್ಟುಗಳನ್ನು ಕಳಚಿ ಇಡುವುದು,ಕೊಚ್ಚಿ ಹೋದ ಸೇತುವೆಗೆ ತಾತ್ಕಾಲಿಕ ಕಾಲುಸಂಕ ರಚನೆ, ನೆರೆ ನುಗ್ಗಿದ ಮನೆಗಳನ್ನು ಸ್ವಚ್ಚತೆ ಗೊಳಿಸುವುದು, ನೀರಿನ ರಭಸಕ್ಕೆ ಕೊಚ್ಚಿ ಬಂದ ಮರ ಮಟ್ಟುಗಳನ್ನು ತೆರವು ಗೊಳಿಸುವುದು ಮೊದಲಾದ ಅಪಾರ ಸೇವೆಗಳನ್ನು ನೀಡಿದ್ದು ನೆರೆ ಸಂಕಷ್ಟಕ್ಕೆ ಸಿಲುಕಿದವರ ತುರ್ತು ಅಗತ್ಯವನ್ನು ಗಮನಿಸಿ ನೆರವಾಗಿದ್ದಾರೆ.ಮುಂದೆ ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ನೆರೆ ಸಂತ್ರಸ್ತರಿಗೆ ನೀಡುವ ಬಟ್ಟೆ ವಿತರಣೆಯ ಕಾರ್ಯಕ್ರಮದಲ್ಲೂ ಇವರು ಕೈ ಜೋಡಿಸಲಿದ್ದಾರೆ.

“ನಮ್ಮ ಘಟಕದ ಸದಸ್ಯರು ಕಳೆದ 5 ದಿನಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇಂತಹ ಸೇವೆ ನಡೆಯುವಲ್ಲಿ ಊರವರ ಮತ್ತು ಸ್ಥಳೀಯಾಡಳಿತದ ಪ್ರೋತ್ಸಾಹ ಬೇಕು.ಆಗ ಮೆತ್ತೆ ಮತ್ತೆ ಕೆಲಸ ಮಾಡವ ಉತ್ತೇಜನ ಸದಸ್ಯರಿಗೆ ಬರುತ್ತದೆ.ಮರ ತೆರವು ಸೇವಾ ಕಾರ್ಯದ ವೇಳೆ ನಮ್ಮ ಘಟಕದ ಸಕ್ರೀಯ ಸದಸ್ಯ ಕುಶಾಲಪ್ಪ ಗೌಡ ಜಾಲುಮನೆ ಯವರ ಕಾಲಿಗೆ ಮರ ಕತ್ತರಿಸುವ ಮೆಷಿನ್ ತಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ನಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ”- ಸತೀಶ್ ಕಲ್ಮಕಾರು ಸಂಯೋಜಕರು ಸುಬ್ರಹ್ಮಣ್ಯ ಘಟಕ

– ಮಧು ಪಂಜ