ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ*

0
95

 

p>

ಮಹತೋಭಾರ
ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸರಕಾರದ ಆದೇಶದ ಮೇರೆಗೆ ಸುಬ್ರಹ್ಮಣ್ಯ ದೇವಸ್ಥಾನದ ಶೃಂಗೇರಿ ಮಠದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ನಡೆಸಲಾಯಿತು.

ಆರಂಭದಲ್ಲಿ ದರ್ಪಣತೀರ್ಥ ನದಿಯಿಂದ ವಿವಿಧ ವಿದಿ ವಿಧಾನಗಳ ಮೂಲಕ ಕಲಶದಲ್ಲಿ ಗಂಗೆಯನ್ನು ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತರಲಾಯಿತು. ಬಳಿಕ ಸಂಕಲ್ಪ ನೆರವೇರಿತು.ಬಳಿಕ ವರಮಹಾಲಕ್ಷ್ಮಿಗೆ ಪುರೋಹಿತರು ನೆರವೇರಿಸಿದರು.ಈ ಮೊದಲು ಸುಭಾಶ್ ಬಾಳಿಲ ಉಪನ್ಯಾಸ ನೀಡಿದರು.ಬಳಿಕ ಪುರೋಹಿತ ಪ್ರಸನ್ನ ಹೊಳ್ಳ ವರಮಹಾಲಕ್ಷ್ಮಿ ವೃತಾಚರಣೆಯ ಮಹತ್ವ ವಿವರಿಸಿದರು.
ನಂತರ ಆಗಮಿಸಿದ ಮುತ್ತೈದೆಯರಿಗೆ ಬಳೆ, ಹೂವು, ಅರಿಸಿನ ಕುಂಕುಮ ಮತ್ತು ರವಕೆ ಕಣವನ್ನು ಪ್ರಸಾದ ರೂಪವಾಗಿ ನೀಡಲಾಯಿತು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಸಿಬ್ಬಂದಿ ಗಳು, ಭಕ್ತರು ಉಪಸ್ಥಿತರಿದ್ದರು.

ವರದಿ: ಸಂತೋಷ್  ಸುಬ್ರಹ್ಮಣ್ಯ

LEAVE A REPLY

Please enter your comment!
Please enter your name here