ಆಪತ್ಕಾಲಕ್ಕೆ ಧಾವಿಸಿದ ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ

0

 

ಕೊಲ್ಲಮೊಗ್ರು, ಕಲ್ಮಕಾರಿನಲ್ಲಿ ಜನರ ದುಖ:ಕ್ಕೆ ಆಸರೆಯಾದ ಸಂಘ

ಭಾರೀ ಮಳೆಗೆ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಇಲ್ಲಿನ ಹಲವಾರು ಮನೆಗಳು ಜಲಾವೃತಗೊಂಡು, ಕೊಲ್ಲಮೊಗ್ರದ ಒಂದು ಮನೆಯೂ ಸಂಪೂರ್ಣ ಕುಸಿದಿತ್ತು,

ಹಲವಾರು ಮನೆಗಳ ಒಳಗೆ ನೀರು ನುಗ್ಗಿ, ಕೆಸರು ತುಂಬಿ ದಿನಬಳಕೆಯ ಪರಿಕರ, ಬಟ್ಟೆ ಬರೆ ಪೀಠೋಪಕರಣಗಳೆಲ್ಲಾ ಕೆಸರಿನ ರಾಡಿಯಲ್ಲಿ ಮುಳುಗಿ ಹೋಗಿತ್ತು. ಮನೆಯವರ ಅಸಹಾಯಕತೆಗೆ ಸುಬ್ರಹ್ಮಣ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸದಸ್ಯರುಗಳ ಗಮನಕ್ಕೆ ಬಂದು, ಸುಳ್ಯ ತಾಲ್ಲೂಕಿನ ದೊಡ್ಡತೋಟ, ಸುಳ್ಯ, ಗುತ್ತಿಗಾರು, ಪಂಜ, ನಾಲ್ಕೂರು
ಘಟಕಗಳ ಸ್ವಯಂ ಸೇವಕ ಭಾಂದವರು ಘಟನಾ ಸ್ಥಳಕ್ಕೆ ಧಾವಿಸಿ ಧರಾಶಾಹಿಯಾದ ಮನೆಯ ಮಣ್ಣಿನಡಿಯಲ್ಲಿ ಸಿಲುಕಿದ್ದ ಸಾಮಾನು ಸರಂಜಾಮುಗಳನ್ನು ಹೊರತೆಗೆದು ಸ್ಥಳಾಂತರಿಸಲು ಸಹಕರಿಸಿದರು.


ಕೊಲ್ಲಮೊಗ್ರುವಿನ ಬೆಂಡೋಡಿ ಸಂಪರ್ಕ ಸೇತುವೆ ಮಾತ್ರ ಉಳಿದು ಅದರ ಒಂದು ಬದಿಗೆ ಹಾಕಿದ್ದ ಮಣ್ಣು ಸಂಪೂರ್ಣ ಹೋಗಿದ್ದು ಅಲ್ಲಿಗೆ ತಾತ್ಕಾಲಿಕ ಮರದ ಕಾಲು ಸೇತುವೆ ಮಾಡಿ ಸಂಪರ್ಕಕ್ಕೆ ಸಹಕಾರ ಮಾಡಿಕೊಡಲಾಯಿತು. ಇಡ್ನೂರು ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡ ಮರಗಳ ತೆರವು, ಬಟ್ಟೆಕಜೆ ಸೇತುವೆಗೆ ಪಾಲ ನಿರ್ಮಾಣ ಮಾಡಲಾಯಿತು.
ಗಿರಿಧರ ಅಂಬೆಕಲ್ಲು, ಚಂದ್ರಶೇಖರ ಅಂಬೆಕಲ್ಲು, ಮನೆಗಳಿಗೆ ನೀರು ನುಗ್ಗಿದ್ದು ಅವರ ಮನೆಯ ವಸ್ತುಗಳೆಲ್ಲ ನೀರಲ್ಲಿ ಕೊಚ್ಚಿ ಹೋಗಿತ್ತು. ಹಾಗೂ ಕೃಷಿಯಲ್ಲಿ ತಂದಿಟ್ಟ ಗೊಬ್ಬರದ ಚೀಲಗಳು ನೀರಲ್ಲಿ ತೇಲಿ ಹೋಗಿತ್ತ್ತು. ಅವುಗಳನ್ನು ಹುಡುಕಿ ತಂದು ಮನೆ ಯವರಿಗೆ ಒಪ್ಪಿಸಲಾಯಿತು.
ಕಲ್ಮಕಾರುವಿನಲ್ಲಿ ಚಿದಾನಂದ, ದಿನೇಶ್ ಕೊಪ್ಪಡ್ಕ, ಕೊಲ್ಲಮೊಗ್ರದ ಗಿರಿಯಪ್ಪ ಕೋನಡ್ಕ ಮನೆ ಸ್ವಚ್ಚ ಮಾಡಲಾಯಿತು, ಮನೆ ಕಳೆದುಕೊಂಡ ಹೇಮಂತ್ ದೋಲನಮನೆ ಸಾಮಾನುಗಳ ತೆರವು ಮಾಡಲಾಯಿತು, ಐನೆಕಿದು ಗ್ರಾಮದ ಈಶ್ವರ ಗುಂಡಡ್ಕ ಮನೆ ಸ್ವಚ್ಚ ಮಾಡಲಾಯಿತು, ಮನೆಗೆ ಬೀಳುವ ಸ್ಥಿತಿ ಯಲ್ಲಿದ್ದ ಅಪಾಯಕಾರಿ ಮರವನ್ನು ತೆರವು ಗೊಳಿಸಲಾಯಿತು.
ಕೆಲವೊಂದು ಕಡೆ ಸ್ಥಳೀಯರು ಸಹಕರಿಸಿದ್ದರು.