ನಾಳೆ (ಆ.7 ) : ಸುಳ್ಯದ ರಂಗಮಯೂರಿಯಲ್ಲಿ ಮೂರನೇ ವರ್ಷದ ವಿಶ್ವ ಅರೆಭಾಷೆ ಹಬ್ಬ – 2022 ಕಾರ್ಯಕ್ರಮ

0
175

 

p>

ಗೌಡರ ಯುವ ಸೇವಾ ಸಂಘ ಸುಳ್ಯ, ಕೊಡಗು ಗೌಡ ಯುವ ವೇದಿಕೆ ಮತ್ತು ಅಂಗಿಕ ಮಲ್ಟಿಮೀಡಿಯಾರವರ ಸಹಭಾಗಿತ್ವದಲ್ಲಿ 3ನೇ ವರ್ಷದ ವಿಶ್ವ ಅರೆಭಾಷೆ ಹಬ್ಬ – 2022 ನಾಳೆ (ಆ.7) ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆಯಲಿದೆ.

ಭಾಷಣ, ಕವನ ಓದುವುದು, ಕಥೆ ಓದುವುದು. ಪದ್ಯ ಹೇಳುವುದು, ಸೋಬಾನೆ, ಹರಟೆ, ‘ಸುಗ್ಗಿ ಅರೆಭಾಷೆ ಹಬ್ಬ’ದ ಸ್ಪರ್ಧೆಗಳು ನಡೆಯಲಿರುವುದು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾ ಪ್ರಸಾದ್ ಕೆ. ವಿ. ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಅಧ್ಯಕ್ಷ‌ತೆಯನ್ನು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವಹಿಸಲಿರುವರು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ| ಯು. ಪಿ. ಶಿವಾನಂದ, ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕೆರ ಮನೋಹರ್, ಕೊಡಗು ಗೌಡ ಯುವ ವೇದಿಕೆಯ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್ ಉಪಸ್ಥಿತರಿರುವರು.
ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಸೀತಾರಾಮ ಕೇವಳರವರು ಅರೆಭಾಷೆ ಹಬ್ಬದ ವಿಶೇಷ ಭಾಷಣ ಮಾಡಲಿರುವರು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here