ಸುಳ್ಯ ನಗರದ ವರ್ತಕರಿಗೆ ಆಡುಗಳ ಉಪಟಳದಿಂದ ನಿತ್ಯವೂ ತೊಂದರೆ- ನ.ಪಂ.ಗೆ ದೂರು

0
400

 

p>

 

ಸುಳ್ಯ ನಗರ ಪ್ರದೇಶಗಳಲ್ಲಿ ಓಡಾಡುತ್ತಿರುವ ಆಡುಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವರ್ತಕರು ಪ್ರತಿ ದಿನ ತೊಂದರೆ ಅನುಭವಿಸುತ್ತಿದ್ದಾರೆ. ಆಡುಗಳ ಹಿಂಡು ನಗರದಾದ್ಯಂತ ತಿರುಗಾಡುತ್ತಿರುವುದಲ್ಲದೆ ರಾತ್ರಿ ಸಮಯದಲ್ಲಿ ಅಂಗಡಿ ಮುಂಗಟ್ಟುಗಳ ಎದುರು ಮಲಗಿ ಗಲೀಜು ಮಾಡಿ ಕೆಲವೊಂದು ವಸ್ತುಗಳನ್ನು ಹಾಳುಗೆಡವುತ್ತಿದೆ‌.

ಇದರಿಂದ ವರ್ತಕರು ದಿನನಿತ್ಯ ಬೆಳಗ್ಗೆ ಸ್ವಚ್ಚ ಗೊಳಿಸುವುದೆ ಒಂದು ಕೆಲಸವಾಗಿದೆ. ಆಡುಗಳ ವಾರಸುದಾರರು ಹಗಲು‌ ಮಾತ್ರವಲ್ಲದೆ ರಾತ್ರಿ ಸಮಯದಲ್ಲೂ ಮನೆಗೆ ಹೊಡೆದುಕೊಂಡು ಹೋಗುವುದಿಲ್ಲ. ಸಾಕು ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದರಿಂದ ಪಾದಚಾರಿಗಳಿಗೆ ಸಮಸ್ಯೆ ಯಾಗುತ್ತಿದೆ.ಇದರ ಕುರಿತು ಈಗಾಗಲೇ ನಗರ ಪಂಚಾಯತ್ ಗೆ ದೂರು ನೀಡಲಾಗಿದೆ. ಈ ಬಗ್ಗೆ ಪಂಚಾಯತ್ ನವರು ಸೂಕ್ತ ಕ್ರಮ ಕೈಗೊಳ್ಳುವಂತೆ ವರ್ತಕರು ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here