ಸುಳ್ಯ ಲ್ಯಾಂಪ್ ಸೊಸೈಟಿಗೆ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪ್ರಶಸ್ತಿ

0

 

 

ಸುಳ್ಯ ತಾಲೂಕು ಪರಿಶಿಷ್ಟ ವಗ೯ಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ವಿಶೇಷ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.


ಸಂಘ 2020-21 ನೇ ಸಾಲಿನ ವ್ಯವಹಾರದಲ್ಲಿ ಸಾಧಿಸಿದ ಪ್ರಗತಿಯನ್ನು ಗುರುತಿಸಿ ವಿಶೇಷ ಪ್ರೋತ್ಸಾಹಕ ಬಹುಮಾನ ಪ್ರಶಸ್ತಿಯನ್ನು ಆ. 5ರಂದು ನಡೆದ ಎಸ್.ಸಿ.ಡಿ.ಡಿ.ಸಿ ಬ್ಯಾಂಕಿನ ವಾಷಿ೯ಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಂಘದ ಅಧ್ಯಕ್ಷರಾದ ಸೀತಾನಂದ ಎಸ್, ಕಾಯ೯ದಶಿ೯ ಚಂದ್ರಶೇಖರ ಡಿ ಯವರನ್ನು ಪ್ರಶಸ್ತಿ ಸ್ಮರಣಿಕೆ ನೀಡಿ ಸನ್ಮಾಸಿದರು. ಈ ಸಂದರ್ಭದಲ್ಲಿನ ಸಂಘದ ನಿದೇ೯ಶಕರುಗಳಾದ ಮಾಧವ ಡಿ, ಸುಬ್ಬಣ್ಣ ನಾಯ್ಕ ಬಿ, ಶ್ರೀಮತಿ ರೇವತಿ ಪಿ, ಶ್ರೀಮತಿ ನೀಲಮ್ಮ ಕೆ, ಶ್ರೀಮತಿ ಕುಸುಮ ಸಿ. ಮತ್ತು ಶ್ರೀಮತಿ ವಿಮಲಾಕ್ಷಿ ಟಿ. ಉಪಸ್ಥಿತರಿದ್ದರು.