ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿನಿ೦ದ ವಿವಿಧ ಕ೦ಪೆನಿಗಳಿಗೆ ಆಯ್ಕೆ

0

ಕೆ.ವಿ.ಜಿ ಇ೦ಜಿನಿಯರಿ೦ಗ್ ಮಹಾವಿದ್ಯಾಲಯದ ಅ೦ತಿಮ ವರ್ಷದ ಎಂ.ಬಿ.ಎ. ವಿಭಾಗದ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಬಿ.ಸಿ., ಅಬ್ದುಲ್ ಹಕೀಮ್ ಎಂ. ಮತ್ತು ದೀಕ್ಷಿತ್ ಕೆ.ಆರ್. Jana Small Finance Bank ಗೆ, ಅ೦ತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸುಭಾಶ್ ಎಂ. STRAECON  ಕಂಪೆನಿಗೆ ಮತ್ತು ಗಮನ್‌ರಾಜ್ ಕೆ.ಯು. NASH  ಕಂಪೆನಿಗೆ ಆಯ್ಕೆಯಾಗಿರುತ್ತಾರೆ.


ಎ.ಒ.ಎಲ್.ಇ(ರಿ) ಪ್ರಧಾನ ಕಾರ್ಯದರ್ಶಿಗಳು ಡಾ. ರೇಣುಕಾಪ್ರಸಾದ್ ಕೆ.ವಿ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್
ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಎ. ಮತ್ತು ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.