ಮೆಟ್ರಿಕ್ ನಂತರದ ಫ್ರೋತ್ಸಾಹಧನಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನ

0

2022-  23 ನೇ ಶೈಕ್ಷಣಕ ಸಾಲಿನಲ್ಲಿ ಪದವಿ/ಸ್ನಾತಕೋತರ/ಮೆಡಿಕಲ್/ಇಂಜಿನಿಯರಿಂಗ್ ಇತರೆ ಕೋರ್ಸುಗಳಲ್ಲಿ ಶೇಕಡಾ 60% ಹೆಚ್ಚು ಅಂಕಗಳಿಸಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲು ಅಂತರ್ಜಾಲದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯನ್ನು ಸಲ್ಲಿಸಿದ ನಂತರ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರಿಂದ ದೃಢೀಕರಿಸಿ, ಒಂದು ವಾರದೊಳಗಾಗಿ ಅರ್ಜಿಯನ್ನು, ಅಗತ್ಯ ದಾಖಲೆಗಳೊಂದಿಗೆ ಲಗತ್ತಿಸಿ ಸಹಾಯಕ ನಿರ್ದೇಶಕರು (ಗ್ರೇಡ್-೨) ಸಮಾಜ ಕಲ್ಯಾಣ ಇಲಾಖೆ, ಸುಳ್ಯ ತಾಲೂಕು ಕಛೇರಿಗೆ ಸಲ್ಲಿಸುವಂತೆ ಪ್ರಕಟಣೆ ಮೂಲಕ ಕೋರಲಾಗಿದೆ. ಅರ್ಜಿ ಸಲ್ಲಿಸಲು ಅ.೩೧ಕೊನೆಯ ದಿನವಾಗಿದ್ದು. sw.kar.nic.in (ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು), tw.kar.nic.in (ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಸ್.ಎಲ್.ಎಲ್.ಸಿ/ಪಿಯುಸಿ/ಎಲ್ಲಾ ಪದವಿಗಳ ರಿಜಿಸ್ಟಾರ್ ನಂಬ್ರ ಮತ್ತು ಅಂಕಪಟ್ಟಿ ಪ್ರತಿ, ಆಧಾರ ಕಾರ್ಡ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಭಾವಚಿತ್ರ, ಅರ್ಜಿದಾರರ ಬ್ಯಾಂಕ್ ಖಾತೆ ಪ್ರತಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವುದು.