ಕೆ.ವಿ.ಜಿ. ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಂದ ಸನ್ಮಾನ

0
151

ಆ. 8  ರಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ವಿ.ಜಿ. ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕ ದಿನಾಚರಣೆ ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು.

p>

ಸಮಾರಂಭವನ್ನು ಉದ್ಘಾಟಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾ ಪ್ರಸಾದ್ ಕೆ.ವಿ ಯವರು ಈ ಸಂಸ್ಥೆಯಲ್ಲಿ ಸುಮಾರು ೩೫ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕಿರಿಯ ತರಬೇತಿ ಅಧಿಕಾರಿಗಳಾದ ಮಹೇಶ್ ನಿಡ್ಯಮಲೆ ಮತ್ತು ಕಛೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿರುವ ಕರುಣಾಕರ ಮಡ್ತಿಲ ಇವರನ್ನು ಅಭಿನಂದಿಸಿ ಸನ್ಮಾನಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ರೇಣುಕಾ ಪ್ರಸಾದ್‌ಕೆ.ವಿ. ರವರು ನಮ್ಮ ತಂದೆಯವರಾದ ಡಾ.ಕೆ.ವಿ.ಜಿ.ಯವರು ಮೊದಲಿಗೆ ಪದವಿ ಕಾಲೇಜನ್ನು ಸ್ಥಾಪಿಸಿ, ೧೯೮೬ರಲ್ಲಿ ಕೆ.ವಿ.ಜಿ. ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಅದು ಸುಸಜ್ಜಿತ ಕಟ್ಟಡ ಹಾಗೂ ಪ್ರಯೋಗಾಲಯಗಳನ್ನು ಹೊಂದಿರುವ ಇಡೀ ರಾಜ್ಯದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ದಿನ ನಿವೃತ್ತಿ ಹೊಂದುತ್ತಿರುವ ಇಬ್ಬರು ಸಿಬ್ಬಂದಿಗಳು ಈ ಸಂಸ್ಥೆಗೆ ಉತ್ತಮ ಸೇವೆ ಸಲ್ಲಿಸಿರುತ್ತಾರೆ. ಅವರ ನಿವೃತ್ತಿ ಜೀವನವು ಸುಖಮಯವಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಉಜ್ವಲ್ ಊರುಬೈಲುರವರು ಮಾತನಾಡಿ ಈ ಸಂಸ್ಥೆಯ ಅಭಿವೃದ್ದಿಗೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗದವರು ಮುಖ್ಯ ಕಾರಣ ಎಂದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶೇ.೧೦೦ ಪ್ರವೇಶಾತಿಯನ್ನು ಮಾಡಿರುವುದಕ್ಕಾಗಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು. ಮುಂದಿನ ವರ್ಷದಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಮೋಟರ್ ಮೆಕಾನಿಕ್ ಎಂಬ ಹೊಸ ಟ್ರೇಡ್ ಅನ್ನು ಆರಂಭ ಮಾಡುತ್ತಿದ್ದೇವೆ. ಈಗಿನ ಆಧುನಿಕತೆಗೆ ಪೂರಕವಾಗಿ ನಾವು ಹೊಸ ಹೊಸ ಟ್ರೇಡ್ ಗಳನ್ನು ಆರಂಭಿಸಲಿದ್ದೇವೆ ಎಂದು ಹೇಳಿ ನಿವೃತ್ತ ಸಿಬ್ಬಂದಿಗಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ದೀಪಕ್ ಕುತ್ತಮೊಟ್ಟೆಯವರು ನಿವೃತ್ತರವರನ್ನು ಅಭಿನಂದಿಸಿ ಕೆ.ವಿ.ಜಿ ವಿದ್ಯಾ ಸಂಸ್ಥೆಯಲ್ಲಿ ನಾನು ಕೂಡ ಹಿರಿಯ ವಿದ್ಯಾರ್ಥಿ ಎಂಬುದನ್ನು ನೆನಪಿಸಿಕೊಂಡರು ಕೆ.ವಿ.ಜಿ. ಐ.ಟಿ.ಐಯ ಆಡಳಿತ ಮಂಡಳಿಯಲ್ಲಿ ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಪ್ರಧಾನ ಕಾರ್ಯದರ್ಶಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ದಯಾನಂದ ಕುರುಂಜಿ, ಸಂಸ್ಥೆಯ ಪ್ರಾಂಶುಪಾಲರಾದ ಚಿದಾನಂದಗೌಡ ಬಾಳಿಲ ನಿವೃತ್ತ ಸಿಬ್ಬಂದಿಗಳಾದ ಮಹೇಶ್ ನಿಡ್ಯಮಲೆ, ಕರುಣಾಕರ ಮಡ್ತಿಲ ಹಾಗೂ ತರಭೇತಿ ಅಧಿಕಾರಿಗಳಾದ ದಿನೇಶ್ ಮಡ್ತಿಲ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ನಳಿನಿಯವರು ಪ್ರಾರ್ಥಿಸಿ, ದಿನೇಶ್ ಮಡ್ತಿಲರವರು ಸ್ವಾಗತಿಸಿ, ಚಿದಾನಂದ ಬಾಳಿಲರವರು ಪ್ರಾಸ್ಥಾವಿಕವಾಗಿ ಮಾತನಾಡಿ, ವರದಿ ವಾಚನ ಮಾಡಿದರು. ಹೊನ್ನಪ್ಪ ಕೆ ಧನ್ಯವಾದ ಸಮರ್ಪಿಸಿ ಭವಾನಿಶಂಕರ ಅಡ್ತಲೆಯವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here