ಕೊಲ್ಲಮೊಗ್ರು ಹರಿಹರ ಸಹಕಾರಿ ಸಂಘದ ರಾತ್ರಿ ಕಾವಲುಗಾರ ಚಂದ್ರ ಗೌಡ ಕುಕ್ಕುಂದ್ರಡ್ಕ ನಿವೃತ್ತಿ

0

 

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರಾತ್ರಿ ಕಾವಲುಗಾರರಾಗಿದ್ದು ಸುಧೀರ್ಘ 23 ವರ್ಷಗಳ ಸೇವೆಯ ಬಳಿಕ ಚಂದ್ರ ಗೌಡ ಕುಕ್ಕುಂದ್ರಡ್ಕ ಅವರು ಜು.31 ರಂದು ಸೇವಾ ನಿವೃತ್ತಿ ಹೊಂದಿದರು.

ಅವರನ್ನು ಸಂಘದ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು. ಈ ಸಂದರ್ಭ ಸೊಸೈಟಿ ಅಧ್ಯಕ್ಷ ಹರ್ಷಕುಮಾರ್ ದೇವಜನ, ಉಪಾಧ್ಯಕ್ಷ ಮಣಿಕಂಠ ಕೊಳಗೆ, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
2000 ನೇ ಇಸವಿಯಲ್ಲಿ ಕರ್ತವ್ಯಕ್ಕೆ ಸೇರಿರುವ ಚಂದ್ರ ಗೌಡ ಅವರ ಪತ್ನಿ ವಸಂತಿ, ಪುತ್ರಿಯರು ಶ್ರೀಮತಿ ವೇದಾವತಿ, ಶ್ರೀಮತಿ ವಿಶಾಲಕ್ಷಿ, ಶ್ರೀಮತಿ ಪದ್ಮಾವತಿ, ಶ್ರೀಮತಿ ಯಶೋದಾ, ಲಿಂಗಪ್ಪ, ಹರೀಶ, ಯೋಗೀಶ ಪುತ್ರರು .