ಕೊಲ್ಲಮೊಗ್ರು-ಹರಿಹರ ಸಹಕಾರಿ ಸಂಘಕ್ಕೆ ಡಿಸಿಸಿ ಬ್ಯಾಂಕ್ ನಿಂದ 5 ಲಕ್ಷ ದೇಣಿಗೆ

0

 

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ
ಕೊಲ್ಲಮೊಗ್ರು – ಹರಿಹರ ಪ್ರಾ.ಕೃ.ಪ.ಸ.ಸಂಘಕ್ಕೆ ನೂತನ ಗೋದಾಮು ಕಟ್ಟಡಕ್ಕೆ ಸಹಾಯಧನವಾಗಿ ರೂ.5 ಲಕ್ಷ ದೇಣಿಗೆ ನೀಡಿದ್ದಾರೆ. ಪುತ್ತೂರು ಡಿಸಿಸಿ ಬ್ಯಾಂಕ್ ನಲ್ಲಿ ಆ.3 ರಂದು ನಡೆದ ಕಾರ್ಯಕ್ರಮದಲ್ಲಿ ಇದನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಹಸ್ತಾಂತರಿಸಿದ್ದು ಕೊಲ್ಲಮೊಗ್ರು – ಹರಿಹರ ಸೊಸೈಟಿ ಅಧ್ಯಕ್ಷ ಹರ್ಷಕುಮಾರ್ ದೇವಜನ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ ಸ್ವೀಕರಿಸಿದರು.

ಈ ಸಂದರ್ಭ ಪುತ್ತೂರು ಡಿ ಸಿ ಸಿ ಬ್ಯಾಂಕ್ ಮುಖ್ಯ ಮೆನೇಜರ್ ರತ್ನಕುಮಾರ್, ಡಿಸಿಸಿ ಬ್ಯಾಂಕ್ ಪ್ರತಿನಿಧಿಗಳಾದ ಮನೋಜ್ ಕುಮಾರ್, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.