ಸಂಪಾಜೆ : ನೀರಿನಲ್ಲಿ ಕೊಚ್ಚಿಹೋದ ಮನೆ ಸಾಮಾಗ್ರಿಗಳನ್ನು ವಾಪಾಸ್ ತಲುಪಿಸಿದ ಯುವಕರು

0

 

 

ನೀರಿನಲ್ಲಿ ಕೊಚ್ಚಿಹೋದ ಮನೆ ಸಾಮಾಗ್ರಿಗಳನ್ನು ವಾಪಾಸ್ ಮನೆಯವರಿಗೆ ಪೇರಡ್ಕದ ಯುವಕರು ತಲುಪಿಸಿದರು.
ಸಂಪಾಜೆ ಗ್ರಾಮದಲ್ಲಿ ಭೀಕರ ಮಳೆ ಜಲ ಪ್ರಳಯದಿಂದ ಕಲ್ಲುಗುಂಡಿ ಹೊಳೆಯ ಸಮೀಪ ಸಂಗಂ ಕಟ್ಟಡದಲ್ಲಿದ್ದ ದೈನಬಿಯವರ ಮನೆಸಾಮಗ್ರಿಗಳು ನೀರಲ್ಲಿ ಕೊಚ್ಚಿ ಹೋಗಿತ್ತು. ಇದು ಪಯಸ್ವಿನಿ ಹೊಳೆಯಲ್ಲಿ ಹರಿದು ಬಂದಾಗ ಅದನ್ನು ಪೇರಡ್ಕದ ಯುವಕರುಗಳಾದ ಜುರೈದ್ ತೆಕ್ಕಿಲ್ ಪೇರಡ್ಕ, ಸಾದುಮನ್ ತೆಕ್ಕಿಲ್ ಪೇರಡ್ಕ, ಸುಹೈಲ್ ಪೇರಡ್ಕ, ಸುನಿಲ್ ಎಕ್ಸ್ ಆರ್ಮಿ ಪೇರಡ್ಕ, ಜನತಾದಳ ಮುಖಂಡ ಹನೀಫ್ ಮೊಟ್ಟೆಂಗರ್ ಹಾಗೂ ಅಬ್ದುಲ್ ಖಾದರ್ ಮೋಟ್ಟೆಂಗಾರ್ ಮೊದಲಾದವರ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು. ಅದನ್ನು ಇವತ್ತು ವಾರಿಸುದರಾರದ ಧೈನಾಬಿ ಅವರ ಕಲ್ಲುಗುಂಡಿ ಮನೆಯಲ್ಲಿ ಅವರಿಗೆ ಸಾದುಮನ್ ತೆಕ್ಕಿಲ್ ಪೇರಡ್ಕ, ಜುರೈದ್ ತೆಕ್ಕಿಲ್ ಪೇರಡ್ಕ, ಹನಿ ಮೊಟ್ಟೆಂಗಾರ್, ಎನ್ ಎಸ್ ಯು ಐ ನ ಜಿಲ್ಲಾ ಕಾರ್ಯದರ್ಶಿ ಉಬೈಸ್ ಗೂನಡ್ಕ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here