ಸುನ್ನಿ ಮ್ಯಾನೇಜ್ ಮೆಂಟ್ ಸುಳ್ಯ ರೀಜನಲ್ ವಾರ್ಷಿಕ ಕೌನ್ಸಿಲ್ ಹಾಗೂ ಅನುಸ್ಮರಣಾ ಕಾರ್ಯಕ್ರಮ

0

 

 

ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ಇದರ ಪ್ರಸಕ್ತ ಸಾಲಿನ ವಾರ್ಷಿಕ ಕೌನ್ಸಿಲ್ ಹಾಗೂ ಅಗಲಿದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ, ಅಬ್ದುಲ್ ಲತೀಫ್ ಸಅದಿ ಪಯಶ್ವಿ, ಎಸ್ ಫಾರೂಖ್ ಸುಣ್ಣಮೂಲೆ ಮುಂತಾದ ಪ್ರಮುಖರ ಅನುಸ್ಮರಣೆ ಮತ್ತು ಸಾಧಕರ ಅಭಿನಂದನಾ ಕಾರ್ಯಕ್ರಮ ನೂರುಲ್ ಇಸ್ಲಾಂ ಮದ್ರಸ ಸಭಾಂಗಣ ಸುಣ್ಣಮೂಲೆಯಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಅಧ್ಯಕ್ಷತೆ ವಹಿಸಿ ಎಸ್ ಎಂ ಎ ಬೆಳ್ಳಾರೆ ಝೋನಲ್ ಅಧ್ಯಕ್ಷ ಇಬ್ರಾಹಿಂ ಬೀಡು ಉದ್ಘಾಟಿಸಿದರು. ಗಾಂಧಿನಗರ ಖತೀಬ್ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಅನುಸ್ಮರಣಾ ಭಾಷಣ ಗೈದು. ಅಸ್ಸಯ್ಯಿದ್ ಹದ್ದಾದ್ ತಂಙಳ್ ಕಾವು ಪ್ರಾರ್ಥನಾ ನೇತೃತ್ವ ವಹಿಸಿದರು ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಪ್ರಸಕ್ತ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು ಟ್ರೈನರ್ ಮುತ್ತಲಿಬ್ ಸಖಾಫಿ ಸರಳಿಕಟ್ಟೆ ವಿಷಯ ಮಂಡಿಸಿದರು. ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಮುಹಮ್ಮದ್ ಸಖಾಫಿ ಮೊಗರ್ಪಣೆ,ಎಸ್ ಎಂ ಎ ಬೆಳ್ಳಾರೆ ಝೋನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಅಹ್ಸನಿ, ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಶುಭ ಹಾರೈಸಿದರು.


 ಗಾಂಧಿನಗರ ಜಮಾಅತ್ ಅಧ್ಯಕ್ಷ ಹಾಜಿ ಮುಸ್ತಫ ಕೆ ಎಂ,ಸುಣ್ಣಮೂಲೆ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ,ಉಪಾಧ್ಯಕ್ಷ ಮೂಸ ಮೂಲೆ, ಉಮ್ಮರ್ ಮುಸ್ಲಿಯಾರ್ ಅನ್ಸಾರಿಯಾ, ಅಬೂಬಕ್ಕರ್ ಫೈಝಿ ಕುಂಭಡಾಜೆ, ಸಮಿತಿ ಉಪಾಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಕಾವು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೀಜ್ಯನಲ್ ವ್ಯಾಪ್ತಿಯ ವಿವಿಧ ಜಮಾಅತ್ ಗಳ ಅಧ್ಯಕ್ಷರುಗಳು ,ಖತೀಬ್ ಉಸ್ತಾದರುಗಳು ಹಾಗೂ ಕೌನ್ಸಿಲರ್ಸ್ ಗಳು ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾರಣಕರ್ತ ಅದ್ಯಾಪಕರುಗಳನ್ನು ಅಭಿನಂದಿಸಲಾಯಿತು. ಅಗಲಿದ ಸಿ ಎಚ್ ಸೂಫಿ ಹಾಜಿ ಸುಣ್ಣಮೂಲೆಯವರ ಹೆಸರಿನಲ್ಲಿ ಅವರ ಮಕ್ಕಳು ಅತಿಥಿ ಸತ್ಕಾರ ಏರ್ಪಾಡು ಮಾಡಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣಮೂಲೆ ವಂದಿಸಿದರು. ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರ್ ನಿರೂಪಿಸಿದರು.