ಆ. 13: ಸವಣೂರಿನಲ್ಲಿ ಶೀಂಟೂರು ಸ್ಮೃತಿ

0

 

ಸವಣೂರಿನ ವಿದ್ಯಾರಶ್ಮಿವಿದ್ಯಾಲಯದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ಶೀಂಟೂರು ಸ್ಮೃತಿ ಕಾರ್ಯಕ್ರಮ ಆ.‌13ರಂದು ನಡೆಯಲಿದೆ.
ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ಶಾರದಾ ಎ.ಜೆ. ಶೆಟ್ಟಿ, ದೀಪ ಪ್ರಜ್ವಲಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸನ್ಮಾನಿತರನ್ನು ಸನ್ಮಾನಿಸಲಿದ್ದಾರೆ. ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ರಂಗಯ್ಯ ಪ್ರಧಾನ ಭಾಷಣ ಮಾಡಲಿದ್ದಾರೆ. ಭಾರತೀಯ ವಾಯು ಸೇನೆಯ ನಿವೃತ್ತ ಸಾರ್ಜೆಂಟ್ ಸಾ.ಕೆ. ಬಾಲಕೃಷ್ಣ ಶೆಟ್ಟಿ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯರಾದ ಮದನ ಪೂಜಾರಿಯವರಿಗೆ ಶೀಂಟೂರು ಸನ್ಮಾನ ನಡೆಯಲಿದೆ. ಪಾಲ್ತಾಡಿ ಪ್ರಾ.ಆ. ಕೇಂದ್ರದ ಪ್ರಾ.ಆ. ಸುರಕ್ಷಾಧಿಕಾರಿ ಶ್ರೀಮತಿ ವಾಗೀಶ್ವರಿ ಕೆ ಮತ್ತು ರಾಯಚೂರಿನ ಖಾನಾಪುರ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಡಾ. ದಂಡಪ್ಪ ಬಿರಾದಾರರಿಗೆ ವಿದ್ಯಾರಶ್ಮಿ ಗೌರವ ಪುರಸ್ಕಾರ ನಡೆಯಲಿದೆ. ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್. ಸುಂದರ ರೈ ಸ್ಥಾಪಕರ ಪ್ರತಿಮೆಗೆ ಹಾರಾರ್ಪಣೆ ಮಾಡಲಿದ್ದಾರೆ.