ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಹಾಬಲ ಕಟ್ಟಕ್ಕೋಡಿ ರಾಜೀನಾಮೆ

0

 

 

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಮಹಾಬಲ ಕಟ್ಟಕ್ಕೋಡಿ ಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಆಡಳಿತ ಮಂಡಳಿಗೆ ಚುನಾವಣೆ ನಡೆದು ಅಧ್ಯಕ್ಷ ಸ್ಥಾನದ ಆಯ್ಕೆ ಬಂದಾಗ ಬಿಜೆಪಿ ಪಕ್ಷದ ತೀರ್ಮಾನದಂತೆ ಎರಡೂವರೆ ವರ್ಷ ಮಹಾಬಲ ಕಟ್ಟಕ್ಕೋಡಿ ಮತ್ತು ಎರಡೂವರೆ ವರ್ಷ ರಮೇಶ್ ದೇಲಂಪಾಡಿಯವರು ಅಧ್ಯಕ್ಷರಾಗುವುದು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಜು.30ರಂದು ಮಹಾಬಕ ಕಟ್ಟಕ್ಕೋಡಿಯವರ ಎರಡೂವರೆ ವರ್ಷದ ಅವಧಿ ಮುಕ್ತಾಯಗೊಂಡಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆ ಅಂಗಿಕಾರವಾಗಲು 15 ದಿನಗಳ ಕಾಲವಕಾಶವಿದ್ದು, ಆ ಬಳಿಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ‌.