ಬಳ್ಳಕ್ಕ : 34 ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ

0

 

ಗುತ್ತಿಗಾರು ಗ್ರಾಮದ ಬಳ್ಳಕ್ಕ ದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಗಣೇಶೋತ್ಸವ ಹಬ್ಬವು ಈ ಬಾರಿ 34 ನೇ ವರ್ಷ ಪೂರೈಸುತ್ತಿದ್ದು, ಗಣೇಶೋತ್ಸವ ನೂತನ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.

ಅಧ್ಯಕ್ಷರಾಗಿ ಗಂಗಾಧರ ಚಿಕ್ಮುಳಿ, ಕಾರ್ಯದರ್ಶಿಯಾಗಿ ಉಜಿತ್ ಶ್ಯಾಮ್ ಚಿಕ್ಮುಳಿ, ಖಜಾಂಜಿಯಾಗಿ ದಿನೇಶ್ ಬಪ್ಪನಮನೆ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಹಲವು ಮಂದಿಯನ್ನು ನೂತನ ಸಮಿತಿಗೆ ಸೇರಿಸಿಕೊಳ್ಳಲಾಯಿತು.

ಗಣೇಶೋತ್ಸವ ಸಮಿತಿಯ ಟ್ರಸ್ಟ್ ಈ ಹಿಂದಿನಂತೆ ಕಾರ್ಯನಿರ್ವಹಿಸಲಿದ್ದು,
ಅಧ್ಯಕ್ಷರಾಗಿ ಶೇಷಪ್ಪ ಗೌಡ ಬಾಬ್ಲುಬೆಟ್ಟು,
ಕಾರ್ಯದರ್ಶಿಯಾಗಿ ಮಹಾಲಿಂಗ.ಬಿ,
ಕೋಶಾಧಿಕಾರಿಯಾಗಿ ಮೋನಪ್ಪ ಬಳ್ಳಕ್ಕ, ಸಂಚಾಲಕರಾಗಿ ರಾಧಾಕೃಷ್ಣ ಭಟ್ ಹೊಸಗದ್ದೆ ಇರಲಿದ್ದಾರೆ.