ಸುಳ್ಯ ಹಿರಿಯ ನ್ಯಾಯಾಧೀಶ ಸೋಮಶೇಖರ್ ಎ ಅವರಿಗೆ ನ್ಯಾಯಾಲಯದ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡುಗೆ

0

ಸುಳ್ಯ ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾಗಿ ಕಳೆದ ಒಂದು ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ಹಿರಿಯ ನ್ಯಾಯಾಧೀಶ ಸೋಮಶೇಖರ ಎ ರವರಿಗೆ ನ್ಯಾಯಾಲಯದ ಸಿಬ್ಬಂದಿ ವರ್ಗದವರಿಂದ ಅಗಸ್ಟ್ 6 ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.

ವೇದಿಕೆಯಲ್ಲಿ ಸುಳ್ಯ ನ್ಯಾಯಾಲಯದ ಕಿರಿಯ ನ್ಯಾಯಾಧೀಶೆ ಕು. ಅರ್ಪಿತಾ, ಡಿವೈಎಸ್ಪಿ ಡಾ. ಪಿ ಗಾನ ಕುಮಾರ್, ಎಪಿಪಿ ಜನಾರ್ಧನ್ ಉಪಸ್ಥಿತರಿದ್ದು ನ್ಯಾಯಾಧೀಶರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿ ಶುಭಹಾರೈಸಿದರು.

ಸಭೆಯಲ್ಲಿ ಭಾಗವಹಿಸಿದ್ದ ನ್ಯಾಯಾಲಯದ ಶಿರಸ್ತೆದಾರರಾದ ಗಿರೀಶ್, ಶಶಿಕಲಾ, ಸುಳ್ಯದಿಂದ ವರ್ಗಾವಣೆಗೊಂಡು ಮಂಗಳೂರು ನ್ಯಾಯಾಲಯದಲ್ಲಿ ಶಿರಸ್ತೆದಾರರಾಗಿರುವ ಪ್ರಸನ್ನ, ಸಿಬ್ಬಂದಿಗಳಾದ ಬೊಮ್ಮಯ್ಯ ಗೌಡ, ರಮೇಶ್,ರಾಯಪ್ಪ,ಸುನಿತಾ, ಮಂಜಣ್ಣ, ಹಾಗೂ ಉಪನ್ಯಾಸಕ ಕೃಷ್ಣರಾಜ್, ಪತ್ರಕರ್ತರಾದ ಹಸೈನಾರ್ ಜಯನಗರ, ಜೆ ಕೆ ರೈ ಮಾತನಾಡಿ ಶುಭ ಹಾರೈಸಿದ.
ಈ ವೇಳೆ ನ್ಯಾಯಾಧೀಶರಿಗೆ ಸನ್ಮಾನ ಕಾರ್ಯಕ್ರಮ ನಡೆಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಎಲ್ಲಾ ಸಿಬ್ಬಂದಿ ವರ್ಗದವರು ಬಾಹುಕರಾಗಿ ನ್ಯಾಯಾಧೀಶರನ್ನು ಬಿಳ್ಕೊಟ್ಟರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಸೋಮಶೇಖರ್ ಇಷ್ಟೊಂದು ಪ್ರೀತಿ ನನ್ನ ವೃತ್ತಿ ಜೀವನದಲ್ಲಿ ಯಾವುದೇ ನ್ಯಾಯಾಲಯದಿಂದ ಸಿಗಲಿಲ್ಲ. ಸುಳ್ಯದ ಜನತೆ ಮತ್ತು ಅಧಿಕಾರಿಗಳು, ನಮ್ಮ ಸಿಬ್ಬಂದಿ ವರ್ಗದವರು ಪ್ರೀತಿ ಮತ್ತು ಅವರು ನೀಡಿದ ಗೌರವವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿ ಕೆಲವು ಸಿಬ್ಬಂದಿಗಳ ಒಡನಾಟವನ್ನು ನೆನಪಿಸಿ ಬಹುಕರಾದರು.
ಪೂರ್ಣಿಮಾ ಕೃಷ್ಣರಾಜ್ ಪ್ರಾರ್ಥನಾ ಗೀತೆ ನಡೆಸಿ ಮಾಜಿ ಶಿರಸ್ತೇದಾರ್ ಪ್ರಸನ್ನ ಸ್ವಾಗತಿಸಿ ನ್ಯಾಯಾಲಯದ ಆರಕ್ಷಕ ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ಸತೀಶ್ ವಂದಿಸಿದರು.


ಕಾರ್ಯಕ್ರಮದಲ್ಲಿ ಸುಳ್ಯ ಶಿಕ್ಷಣ ಸಂಯೋಜಕ ಚಂದ್ರಶೇಖರ್, ಕಿರಿಯ ಮತ್ತು ಹಿರಿಯ ನ್ಯಾಯಾಲಯದ ಸುಮಾರು ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here