ಎಸ್.ನಾಗರಾಜ ಶೇಟ್‌ರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ

0

 

ಜುಲೈ.20 ರಂದು ನಿಧನರಾದ ಸುಳ್ಯದ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್‍ಸ್‌ನ ಮಾಲಕರಾದ ಎಸ್. ನಾಗರಾಜ ಶೇಟ್‌ರವರ ವೈಕುಂಠ ಸಮಾರಾಧನೆ ಕಾರ್ಯಕ್ರಮವು ಆ .4 ರಂದು ಸುಳ್ಯ ಅಂಬೆಟಡ್ಕದ ಶ್ರೀ ವೆಂಕಟರಮಣ ದೇವ ಮಂದಿರದ ಸಭಾಭವನದಲ್ಲಿ ನಡೆಯಿತು.
ಮೃತರ ಕುರಿತು ಶ್ರೀನಿವಾಸ್ ಮಾಸ್ಟರ್ ಹಳೆಗೇಟು ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ಗಣ್ಯರು ಎಸ್. ನಾಗರಾಜ ಶೇಟ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಭಾಗೀರಥಿ ಶೇಟ್, ಪುತ್ರ ಭುವನೇಂದ್ರ ಶೇಟ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.