ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾ. ಕೆ.ವಿ.ಜಿಯವರ ಪುಣ್ಯಸ್ಮರಣೆ

0

 

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಸ್ಥಾಪಕಾಧ್ಯಕ್ಷ ಡಾ. ಕುರುಂಜಿ ವೆಂಕಟ್ರಮಣ ಗೌಡರ 9ನೇ ಪುಣ್ಯತಿಥಿಯ ಅಂಗವಾಗಿ ಡಾ. ಕೆ.ವಿ.ಜಿ ಸಂಸ್ಮರಣೆ ಕಾರ್ಯಕ್ರಮ ಕೆ.ವಿ.ಜಿ ಮೇಡಿಕಲ್ ಕಾಲೇಜಿನಲ್ಲಿ ಆ. 7ರಂದು ನಡೆಯಿತು.

ಕಾಲೇಜಿನ ಡೀನ್ ಡಾ. ನಿಲಾಂಬಿಕೈ ನಟರಾಜನ್, ಕೆವಿಜಿಯವರ ಬಾವಚಿತ್ರಕ್ಕೆ ದೀಪ ಪ್ರಜ್ವಲಿಸಿದರು. ಹಾಗೂ ಅಕಾಡೇಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದನಾಂದ ಮತ್ತು ಶ್ರೀಮತಿ ಶೋಭಾ ಚಿದನಾಂದ ಇವರು ಕೆ.ವಿ.ಜಿ.ಯವರ ಬಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಎಲ್ಲಾ ವಿಭಾಗ ಮುಖ್ಯಸ್ಥರುಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿ ಕೆ.ವಿ.ಜಿ.ಯವರಿಗೆ ಗೌರವಸಲ್ಲಿಸಿದರು.