ನೆರೆ ಸಂತ್ರಸ್ತರಿಗೆ ಕೆಥೋಲಿಕ್ ಸಭಾದ ವತಿಯಿಂದ ಆಹಾರ ಕಿಟ್ ವಿತರಣೆ

0

 

ಕೆಥೋಲಿಕ್ ಸಭಾ ಮಂಗಳೂರು ಸುಳ್ಯ ಘಟಕದ ವತಿಯಿಂದ ಸುಳ್ಯ ಸಂಪಾಜೆ, ಕಲ್ಲುಗುಂಡಿ,ತೊಡಿಕಾನ,ಗೂನಡ್ಕ ಪರಿಸರದ ಸುಮಾರು 36 ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಮಾಡಲಾಯಿತು.


ಸುಳ್ಯ ಕೆಥೋಲಿಕ್ ಸಭಾದ ಅಧ್ಯಕ್ಷ ಅರುಣ್ ಕ್ರಾಸ್ತ,ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ದೀರ ಕ್ರಾಸ್ತ,ಮಾಜಿ ಸದಸ್ಯೆ ಜೂಲಿಯಾನ ಕ್ರಾಸ್ತ,ಅನೀಲ್ ಡಿಸೋಜ, ಸಜ್ಜನ ಸಭಾಂಗಣದಲ್ಲಿ ನೆಲೆಸಿರುವ ಕುಟುಂಬಗಳಿಗೆ ವಿತರಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್, ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಸಂಪಾಜೆ ಗ್ರಾಮಪಂಚಾಯತ್ ಸದಸ್ಯ ಎಸ್.ಕೆ ಹನೀಫ್,ಅಬೂಶಾಲಿ,ಸಜ್ಜನ ಪ್ರತಿಷ್ಠಾನ ನಿರ್ದೇಶಕ ರಹೀಮ್ ಬೀಜದಕಟ್ಟೆ, ರಮೇಶ ಕಲ್ಲುಗುಂಡಿ,ದಿವಾಕರ್ ಉಪಸ್ಥಿತರಿದ್ದರು.