ಕಲ್ಮಡ್ಕ : ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

0
110

 

 

ಮರಾಟಿ ಸಮಾಜ ಸೇವಾ ಸಂಘ ಕಲ್ಮಡ್ಕ ಇದರ ವಾರ್ಷಿಕ ಮಹಾಸಭೆ ಆ. 07ರಂದು ಸಂಘದ ಅಧ್ಯಕ್ಷರಾದ ತಿಮ್ಮಪ್ಪ ನಾಯ್ಕ ಉಡುವೆಕೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ತೀರ್ಥಾನಂದ ಕಲ್ಮಡ್ಕ ಲೆಕ್ಕಪತ್ರ ಮತ್ತು ವಾರ್ಷಿಕ ವರದಿಯನ್ನು ಮಂಡಿಸಿದರು.
ನಂತರ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ವೆಂಕಪ್ಪ ನಾಯ್ಕ ಮಂಞನಕಾನ ಮರಾಟಿ ಸಮುದಾಯದ ಬಗ್ಗೆ ಮತ್ತು ಸಂಘಟನೆಯ ಬಗ್ಗೆ ತಿಳಿಸಿದರು.
ಸಂಘದ ಗೌರವಾಧ್ಯಕ್ಷರಾದ ಓಬಯ್ಯ ನಾಯ್ಕ ಮಾಳಪ್ಪಮಕ್ಕಿ ಮತ್ತು ಉಪಾಧ್ಯಕ್ಷರಾದ ನಾರಾಯಣ ನಾಯ್ಕ ಬೊಳಿಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೆಂಕಟ್ರಮಣ ಧರ್ಮಡ್ಕ ಪ್ರಾರ್ಥಿಸಿ, ರಾಜೇಶ್ ಕಾಚಿಲ ವಂದಿಸಿದರು. ಜಯರಾಜ್ ಕಡಂಬುಕಾನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here