ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯಿಂದ ಕುರುಂಜಿ ನೆನಪಲ್ಲಿ ವನಮಹೋತ್ಸವ

0

 

ಸುಳ್ಯದ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ವತಿಯಿಂದ ಕುರುಂಜಿ ವೆಂಕಟ್ರಮಣ ಗೌಡರ 9 ನೇ ಪುಣ್ಯದಿನವಾದ ಆ.7 ರಂದು ಕುರುಂಜಿಯವರ ನೆನಪಲ್ಲಿ ವನಮಹೋತ್ಸವ ನಡೆಸಲಾಯಿತು.
ಚೆನ್ನಕೇಶವ ದೇವಸ್ಥಾನದ ಎದುರು ಭಾಗದಲ್ಲಿ ಜಾತ್ರೆಯ ಸಂದರ್ಭ ಜೈಂಟ್ ವೀಲ್ ಗಳನ್ನು ಅಳವಡಿಸುವ ಜಾಗದ ಬದಿಯಲ್ಲಿ ಗಿಡಗಳನ್ನು ನೆಡಲಾಗಿದ್ದು , ದೇವಸ್ಥಾನದ ಆಡಳಿತ ಮೊಕ್ತೇಸರ ಡಾ।ಹರಪ್ರಸಾದ್ ತುದಿಯಡ್ಕ ಉದ್ಘಾಟನೆ ನೆರವೇರಿಸಿದರು.

 

ಸಮಿತಿಯ ಗೌರವ ಸಲಹೆಗಾರ ಡಾ. ಕೆ.ವಿ.ರೇಣುಕಾಪ್ರಸಾದ್, ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ, ಎ.ಸಿ.ಎಫ್. ಪ್ರವೀಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಬಹುತೇಕ ಪುರ್ವಾಧ್ಯಕ್ಷರುಗಳು ಭಾಗವಹಿಸಿ ಗಿಡ ನೆಟ್ಟರು. ಕೆವಿಜಿ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹರೀಶ್ ಉಬರಡ್ಕ, ವನಮಹೋತ್ಸವ ಯೋಜನಾ ನಿರ್ದೇಶಕರಾದ ರಾಜು ಪಂಡಿತ್ ಹಾಗೂ ಮಂಜುನಾಥ ಮೇಸ್ತ್ರಿ ಬಳ್ಳಾರಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸುಳ್ಯ ಹಬ್ಬ ಸಮಿತಿ ಸಮಾಜ ಸೇವಾ ವಿಭಾಗದ ಉಪಸಮಿತಿ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.