ಸುಳ್ಯ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗುರುಪ್ರಸಾದ್ ರೈ ಮೊರಂಗಲ್ಲುರವರಿಂದ 1 ಲಕ್ಷ ದೇಣಿಗೆ ಹಸ್ತಾಂತರ

0

 

ಸುಳ್ಯದ ಅಂಬೆಟಡ್ಕದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನದ ಕಟ್ಟಡಕ್ಕೆ ಬೆಂಗಳೂರಿನ ಸಹಕಾರಿ ಸಂಘದ ಅಧ್ಯಕ್ಷ, ಉದ್ಯಮಿ ಗುರುಪ್ರಸಾದ್ ರೈ ಮೊರಂಗಲ್ಲುರವರು 1 ಲಕ್ಷವನ್ನು ಆ. 7ರಂದು ಹಸ್ತಾಂತರ ಮಾಡಿದರು.

ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಟ್ಟಡ ವೀಕ್ಷಣೆ ಮಾಡಿದ ಬಳಿಕ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳರಿಗೆ ದೇಣಿಗೆ ನೀಡಿದರು. ಪ್ರೆಸ್ ಕ್ಲಬ್ ವತಿಯಿಂದ ಗುರುಪ್ರಸಾದ್ ರೈ ಮೊರಂಗಲ್ಲು ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಖಜಾಂಜಿ ಯಶ್ವಿತ್ ಕಾಳಮ್ಮನೆ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ಅಧ್ಯಕ್ಷ ಜೆ.ಕೆ ರೈ, ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ, ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ, ನಿರ್ದೇಶಕರುಗಳಾದ ಜಯಪ್ರಕಾಶ್ ಕುಕ್ಕೇಟ್ಟಿ, ಗಿರೀಶ್ ಅಡ್ಪಂಗಾಯ, ಶಿವಪ್ರಸಾದ್ ಕೇರ್ಪಳ, ಶರೀಫ್ ಜಟ್ಟಿಪಳ್ಳ ಮತ್ತು ಹಸೈನಾರ್ ಜಯನಗರ ಉಪಸ್ಥಿತರಿದ್ದರು.