ಅರಂತೋಡು ತೊಡಿಕಾನ ಸಹಕಾರಿ ಸಂಘದಿಂದ ಸಹಕಾರಿ ಸಮುದಾಯ ಸಂಪರ್ಕ ಸಭೆ

0

ಅರಂತೋಡು ತೋಡಿಕಾನ ವ್ಯವಸಾಯ ಸಹಕಾರಿ ಸಂಘ ವತಿಯಿಂದ ಸಹಕಾರಿ ಸಮುದಾಯ ಸಂಪರ್ಕ ಸಭೆಯು ಅಡ್ತಲೆ ಸರಕಾರಿ ಶಾಲೆಯ ಸಭಾಂಗಣದಲ್ಲಿ ಆ.7ರಂದು ನಡೆಯಿತು.

ಅರಂತೋಡು ತೊಡಿಕಾನ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾರು ಕೃಷಿ ಭೂಮಿ ಹೊಂದಿದ್ದಾರೆ.ಯಾರು ಸರಕಾರಿ ಸಂಘ ಗಳ ಸರಕಾರದಿಂದ ಕೊಡಲ್ಪಡುವ ಬೆಳೆ ಸಾಲ ಇರಬಹುದು ರೈತರ ಸಬ್ಸಿಡಿ ಸಾಲ ಇರಬಹುದು. ಸಹಕಾರಿ ಸಂಘ ಯಶಸ್ವಿ ಯಾಗಿ ಮುನ್ನಡೆಯಬೇಕೆಂದರೆ ಸದೃಢವಾಗಿ ಬೆಳೆಯಬೇಕೆಂದರೆ ಪ್ರತಿಯೊಬ್ಬ ಸದಸ್ಯ ರ ಪಾಲ್ಗೊವಿಕೆ ಪ್ರಾಮುಖ್ಯ.ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಹಿರಿಯ ಸಹಕಾರಿ ಸದಸ್ಯ ಅನಂದ ಜೋಡಿಪಣೆ ನೇರವೇರಿಸಿದರು.ಹೊನ್ನಪ್ಪ ಮಾಸ್ಟರ್ ಅಡ್ತಲೆಯವರು ವಿಪರೀತ ಮಳೆಯಿಂದ ಕೃಷಿ ಬೆಳೆ ನಾಶ ವಾಗಿದೆ ಇದರ ಬಗ್ಗೆ ನಷ್ಟ ಪರಿಹಾರಕ್ಕೆ ಸರಕಾರವನ್ನು ಒತ್ತಾಯ ಮಾಡಬೇಕೆಂದು ಹೇಳಿದರು.ಸಭೆಯಲ್ಲಿ ಇನ್ನಿತರ ಸದಸ್ಯರು ಸಮಸ್ಯೆಗಳನ್ನು ಮಂಡಿಸಿದರು ಇದಕ್ಕೆ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸಮರ್ಪಕವಾಗಿ ಉತ್ತರವನ್ನು ನೀಡಿದರು.ಮುಂದಕ್ಕೆ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮ ದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ,ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕು.ಶ್ವೇತಾ ಅರಮನೆಗಾಯ,ಗ್ರಾಮ ಪಂಚಾಯತ್ ಸದಸ್ಯ ರಾದ ಕೇಶವ ಅಡ್ತಲೆ, ಶ್ರೀಮತಿ ಸುಜಯ್ ಲೋಹಿತ್ ಮೇಲಡ್ತಲೆ,ಸ್ಪಂದನ ಗೆಳೆಯರ ಬಳಗ ಅಧ್ಯಕ್ಷ ವಿನಯ್ ಬೆದ್ರ್ ಪಣೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷ ಗೋಪಾಲಕೃಷ್ಣ ಪಿಂಡಿಮನೆ ಮೊದಲಾದವರು ಉಪಸ್ಥಿತರಿದ್ದರು .ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ .ಕಾರ್ಯಕ್ರಮ ನಿರೂಪಿಸಿದರು. ನಯನ ಕಿರ್ಲಾಯ ವಂದಿಸಿದರು.

LEAVE A REPLY

Please enter your comment!
Please enter your name here