ಬೆಳ್ಳಾರೆ: ರಾಧಾಕೃಷ್ಣ ಆಚಾರ್ಯ ಅಟ್ಲೂರರವರಿಗೆ ಶ್ರದ್ಧಾಂಜಲಿ ಸಭೆ

0
356

 

p>

ಇತ್ತೀಚೆಗೆ ನಿಧನರಾದ ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಆಚಾರ್ಯ ಅಟ್ಲೂರುರವರಿಗೆ ಶ್ರದ್ಧಾಂಜಲಿ ಸಭೆ ಆ. 7ರಂದು ಬೆಳ್ಳಾರೆ ಪನ್ನೆಯಲ್ಲಿರುವ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸೋಮಶೇಖರ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ನುಡಿನಮನ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷ ಚಿನ್ಮಯ ಆಚಾರ್ಯ, ಸದಸ್ಯ ತೀರ್ಥರಾಮ ಆಚಾರ್ಯ ನುಡಿನಮನಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ವಾಸುದೇವ ಆಚಾರ್ಯ ವಂದಿಸಿದರು. ಭಾಗವಹಿಸಿದ ಸಮಾಜ ಬಾಂಧವರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಸೌಖ್ಯದಿಂದ ನಿಧನರಾದ ದಯಾನಂದ ಆಚಾರ್ಯ ಕಳಂಜರವರ ಪತ್ನಿ ಶ್ರೀಮತಿ ವಾಣಿಯವರಿಗೆ ದಾನಕಗಳ ಮೂಲಕ ಸಂಗ್ರಹಿಸಿದ ಧನ ಸಹಾಯವನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here