ನಿಂತಿಕಲ್ಲು ಎಸ್.ಪಿ.ಪಿ.ಐ.ಟಿ.ಐ ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ವಿವಿಧ ಕಂಪೆನಿಗೆ ಆಯ್ಕೆ

0

 

ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕೆ ತರಬೇತಿ ಕೇಂದ್ರ ವರ್ಷ ನಗರ ನಿಂತಿಕಲ್ಲು ಇದರಲ್ಲಿ 2020 – 22ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಹಾಗೂ ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಟೊಯೋಟೊ ಕಿರ್ಲೋಸ್ಕರ್ ಹಾಗೂ ಅಲ್ಟಿ ಗ್ರೀನ್ ಕಂಪನಿಗೆ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಗುರುಪ್ರಸಾದ ತೋಟ ಹಾಗೂ ಉದ್ಯೋಗ ನೇಮಕಾತಿ ಅಧಿಕಾರಿಯಾದ ಶೇಖರ್ ಕುದ್ದಾಜೆ ತಿಳಿಸಿರುತ್ತಾರೆ. ಅದೇ ರೀತಿ ಪ್ರತಿವರ್ಷವೂ ಕೂಡ ಶೇಕಡ 100 ಉದ್ಯೋಗ ನೇಮಕಾತಿಯಾಗುತ್ತಿದ್ದು, ಸಂಸ್ಥೆಯಲ್ಲಿ ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಎಲೆಕ್ಟ್ರಿಷಿಯನ್, ಮೆಕ್ಯಾನಿಕಲ್ ಏರ್ಕಾಂಡೀಷನಿಂಗ್, ಸಿವಿಲ್, ಮೆಕ್ಯಾನಿಕಲ್ ಫಿಟ್ಟರ್ ವಿಭಾಗಕ್ಕೆ ವ್ಯಾಸಂಗ ಮಾಡಲು ಕೆಲವೇ ಸೀಟುಗಳು ಲಭ್ಯವಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿರುತ್ತದೆ.

 

LEAVE A REPLY

Please enter your comment!
Please enter your name here