ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಪುತ್ತೂರು ಇದರ ಸಹ ಸಂಸ್ಥೆಯಾದ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಸುಳ್ಯದ ಸೂರ್ತಿಲ ಅಂಗನವಾಡಿ ಕೇಂದ್ರಕ್ಕೆ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಸರಸ್ವತಿ ಸಹಕಾರಿಯ ಎಂ ಎಸ್ ರಸ್ತೆ ಶಾಖೆ ಪುತ್ತೂರು ಇದರ ಶಾಖಾ ವ್ಯವಸ್ತಾಪಕರಾದ ದೇವಿಪ್ರಸಾದ್ ಎ ಅಂಗನವಾಡಿ ಶಿಕ್ಷಕಿ ಶಿಮತಿ ಲತಾ ಟೀಚರ್ ಹಾಗೂ ಪುಟಾಣಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.