ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ಜಿಲ್ಲಾ ಕಾಂಗ್ರೆಸ್ ನಿಂದ ಮೋಹನ್ ಗೌಡ ಕಲ್ಮಂಜ ನೇಮಕ

0

 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಮುಂಬರುವ ವಿಧಾನ ಸಭಾ ಹಾಗೂ 75ನೇ ಸ್ವಾತಂತ್ರ ಮಹೋತ್ಸವ
ರಾಹುಲ್ ಗಾಂಧಿ ಯವರ ಪಾದಯಾತ್ರೆ ಉಸ್ತುವಾರಿ ಸಂಘಟನೆ ದೃಷ್ಟಿಯಿಂದ ಜಿಲ್ಲೆಯ ಯುವ ರಾಜಕಾರಣಿ ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು ಆಗಿರುವ ಮೋಹನ್ ಗೌಡ ಕಲ್ಮಂಜ ಅವರನ್ನು ಸುಳ್ಯ ಬ್ಲಾಕ್ ಗೆ ಉಸ್ತುವಾರಿಯಾಗಿ ನೇಮಕಾತಿ ಆದೇಶ ಮಾಡಲಾಗಿದೆ.

ಮೋಹನ್ ಗೌಡ ಕಾಂಗ್ರೆಸ್ ಮುಂಚೂಣಿ ಘಟಕದಲ್ಲೇ ಪ್ರಮುಖ ಆಗಿರುವ ಕಿಸಾನ್ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದು ಜಿಲ್ಲೆಯಲ್ಲೇ ಪ್ರಮುಖ ಜವಾಬ್ದಾರಿ ವಹಿಸಿ ಕೊಂಡ ಕಿರಿಯ ವಯಸ್ಸಿನ ಯುವ ರಾಜಕಾರಣಿಯಾಗಿ ಸಂಘಟನೆ ಮತ್ತು ವಾಕ್ ಚಾತುರ್ಯದಿಂದ ಹಲವಾರು ದೃಶ್ಯಮಾಧ್ಯಮಗಳಲ್ಲಿ ಗಮನ ಸೆಳೆದಿದ್ದಾರೆ.
ಒಕ್ಕಲಿಗ ಸಮಾಜದ ಸಂಘಟನೆ ಯಲ್ಲೂ ಸಕ್ರಿಯ ಆಗಿರುವ ಅವರನ್ನು ಪಕ್ಷ ಅವರ ಸಾಧನೆ ಗುರುತಿಸಿ ಇದೀಗ ಸುಳ್ಯ ವಿಧಾನ ಸಭಾ ಬ್ಲಾಕ್. ಕಾಂಗ್ರೆಸ್ ಉಸ್ತುವಾರಿ ನೇಮಕಾತಿ ಮಾಡಲಾಗಿದೆ.
ಇವರು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಬಂಡ್ರಜಾಲು ಮನೆತನದವರು.
ಪ್ರಸ್ತುತ ಉದ್ಯಮಿ ಮತ್ತು ಕೃಷಿಕರು ಆಗಿರುವ ಅವರು ಕರ್ನಾಟಕ ಆರ್ಗಾನಿಕ್ ಫೌಂಡೇಶನ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ನಾಟಕ ರಾಜ್ಯದ ಸುಮಾರು 9 ಜಿಲ್ಲೆಗಳಲ್ಲಿ ತಮ್ಮ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here