ಹರಿಹರ ಪಲ್ಲತ್ತಡ್ಕ : ಸೇತುವೆ ಸಂಪರ್ಕಕ್ಕಾಗಿ ದುಡಿಯುತ್ತಿರುವ ಜನರು

0

ಕೊಲ್ಲಮೊಗ್ರ ಹಾಗೂ ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪರ್ಕ ರಸ್ತೆಯಾದ ಹರಿಹರ, ಬಾಳುಗೋಡು ಹಾಗೂ ಶಿರೂರು, ಬೆಂಡೋಡಿ ಈ ಭಾಗದಲ್ಲಿ ಪ್ರಮುಖ ಸಂಪರ್ಕ ಸೇತುವೆಗಳು ಸಂಪರ್ಕ ಕಡಿತಗೊಂಡಿದ್ದು, ಸದ್ರಿ ಸೇತುವೆಯ ಪುನರ್ ಸಂಪರ್ಕಕ್ಕಾಗಿ ಆ ಭಾಗದ ಜನರುಗಳು ತಂಡೋಪ ತಂಡವಾಗಿ ಗೋಣಿಚೀಲಗಳಲ್ಲಿ ಮರಳನ್ನ ತುಂಬಿ ಸೇತುವೆಯ ತಡೆಗೋಡೆ ನಿರ್ಮಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಅವರೊಂದಿಗೆ ಸ್ಥಳೀಯ ಆಡಳಿತದವರು ಕೂಡ ಕೈ ಜೋಡಿಸಿಕೊಂಡಿದ್ದಾರೆ.
(ವರದಿ : ಡಿ.ಹೆಚ್.)