ಮನೆ ಹಾನಿಗೊಳಗಾದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಸಿಬ್ಬಂದಿಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಿಂದ ಪರಿಹಾರ ವಿತರಣೆ

0

 

 

ಭೀಕರ ಮಳೆಯಿಂದ ನೆರೆಹಾನಿಗೊಳಗಾಗಿ ಮನೆಯನ್ನು ಹಾನಿಗೊಳಗಾದ ಕೆ.ವಿ.ಜಿದಂತ ಮಹಾವಿದ್ಯಾಲಯದ ಸಿಬ್ಬಂದಿಗೆ ರಾಜ್ಯಒಕ್ಕಲಿಗರ ಸಂಘದ ಉಪಾಧ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ರೂ. 1೦,೦೦1 ವನ್ನು ತುರ್ತು ಪರಿಹಾರವಾಗಿ ನೀಡಿ ಸಾಂತ್ವನ ಹೇಳಿದರು.


ಕಲ್ಲುಗುಂಡಿ ಸಂಪಾಜೆ ಭಾಗದಲ್ಲಿ ಆ. 2ರಂದು ಸುರಿದ ಭೀಕರ ಮಳೆಗೆ ಕೆ.ವಿ.ಜಿದಂತ ಮಹಾವಿದ್ಯಾಲಯದ ಸಿಬ್ಬಂದಿ ಮಧುರವರ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ವಾಸಿಸಲು ಕಷ್ಟ ಸಾಧ್ಯವಾದುದನ್ನು ಮನಗಂಡು ಅವರಿಗೆಪ್ರಧಾನ ಕಾರ್ಯದರ್ಶಿಯವರ ಕಛೇರಿಯಲ್ಲಿ ಸಹಾಯಧನವನ್ನು ವಿತರಿಸಿ ಸಾಂತ್ವನದ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್‌ಊರುಬೈಲು, ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷನಾಯಕ್, ಆಡಳಿತಾಧಿಕಾರಿ ಮಾಧವ ಬಿ.ಟಿ, ಎ.ಓ.ಎಲ್.ಇ. ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು.