ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ ವೇದಿಕೆ ಕಲ್ಪಿಸುತ್ತದೆ : ಕೆ.ಆರ್.ಗಂಗಾಧರ್

0

 

ಅರಂತೋಡಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ಕಾಲೇಜನ ಸಂಚಾಲಕ  ಕೆ ಆರ್ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಂಯಮ, ಉತ್ತಮ ನಾಯಕತ್ವ ಬೆಳೆಸುವಲ್ಲಿ ಎನ್ಎಸ್ಎಸ್ ವೇದಿಕೆ ಕಲ್ಪಿಸುತ್ತವೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಸೀತಾರಾಮ ಮಾತನಾಡಿ,ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಪಡೆಯಲು ಎನ್ಎಸ್ಎಸ್ ಪೂರಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ  ರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಘಟಕ ನಾಯಕ  ನಿಶಾಂತ್ ಬಿ.ಆರ್ ಮತ್ತು ನಾಯಕಿ ಮೋಕ್ಷ ಕೆ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಟಕಪೂರ್ವ ಕಾರ್ಯಕ್ರಮಾಧಿಕಾರಿ,  ಮೋಹನ್ ಚಂದ್ರ ಪ್ರಸ್ತಾನೆಯೊಂದಿಗೆ ಸ್ವಾಗತಿಸಿದರು.ಹಿರಿಯ ಉಪನ್ಯಾಸಕ  ಸುರೇಶ್ ವಾಗ್ಲೆ ವಂದಿಸಿದರು.
ಕಾರ್ಯಕ್ರಮಾಧಿಕಾರಿ  ಗೌರಿಶಂಕರ ಕಾರ್ಯಕ್ರಮ ನಿರೂಪಿಸಿದರು.ಸಹಾಯಕ ಕಾರ್ಯಕ್ರಮಾಧಿಕಾರಿ ಲಿಂಗಪ್ಪ, ಉಪನ್ಯಾಸಕ  ಪದ್ಮಕುಮಾರ್, ಭಾಗ್ಯಶ್ರೀ, ನಂದಿನಿ, ಶಾಂತಿ, ಕುಮಾರಿ ನಯನಾ ಸಹಕರಿಸಿದರು.