ಮಳೆಯಿಂದ ಹಾನಿಗೊಳಗಾದ ಕುಟುಂಬಕ್ಕೆ ಮರಾಠಿ ಸಮಾಜದಿಂದ ಸಹಾಯಧನ

0
386

ಮಳೆಯಿಂದ ಹಾನಿಗೊಳಗಾದ ಕುಟುಂಬಕ್ಕೆ ಮರಾಠಿ ಸಮಾಜದಿಂದ ಆ. 7 ರಂದು ಸಹಾಯಧನ ವಿತರಿಸಲಾಯಿತು.
ಭಾರಿ ಮಳೆಯಿಂದಾಗಿ ಕಲ್ಲುಗುಂಡಿಯ ಸುಧಾಕರ ನಾಯ್ಕ ಅವರ ಮನೆ ಸಂಪೂರ್ಣವಾಗಿ ಬಿದ್ದು ಹೋಗಿ ಮನೆಯ ವಸ್ತುಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿ ನಿರಾಶ್ರಿತರಾಗಿದ್ದರು.
ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಈ ಸಮಯದಲ್ಲಿ ತೀರಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದುದರಿಂದ, ಇವರಿಗೆ ಸಹಾಯ ಹಸ್ತವನ್ನು ನೀಡುವ ಸಲುವಾಗಿ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರಾಶ್ರಿತ ನಿಧಿಯನ್ನು ಸಂಗ್ರಹಿಸಿ ಸುಧಾಕರ್ ನಾಯ್ಕ ಅವರಿಗೆ ಅವರ ಕುಟುಂಬಕ್ಕೆ ರೂ. 1೦,೦೦೦ ಗಳನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here