ಎಡಮಂಗಲ : ಗಣೇಶೋತ್ಸವ ಸಮಿತಿ ರಚನೆ

0
354

 

 

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಗಣೇಶೋತ್ಸವದ ಬಗ್ಗೆ ಆಗಸ್ಟ್ ೭ರಂದು ದೇವಳದ ವಠಾರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲರವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆ ನಡೆಯಿತು.


ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಿಪ್ರಸಾದ್, ರಾಮಕೃಷ್ಣ ರೈ ಮಾಲೆಂಗ್ರಿ, ಗಿರೀಶ್ ನಡುಬೈಲು, ರವೀಂದ್ರ ದೇರಳ, ಪ್ರಿಯಾಂಕ ಪುಳಿಕುಕ್ಕು, ಪ್ರಧಾನ ಅರ್ಚಕರಾದ ಸೀತಾರಾಮಯ್ಯನವರು ನೂಚಿಲ, ಶ್ಯಾಮ್ ಕಿಶೋರ್ ಕೇಂಜೂರು, ಸಿಬ್ಬಂದಿ ರವೀಂದ್ರ ಮಾಲೆಂಗಿರಿ ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಅಶ್ವತ್ಥ್ ಬಳಕ್ಕಬೆ ಜಾಲ್ತಾರು, ಉಪಾಧ್ಯಕ್ಷರಾಗಿ ಪ್ರವೀಣ್ ರೈ ಮರ್ದೂರು, ಕಾರ್ಯದರ್ಶಿಯಾಗಿ ಸರ್ವೇಶ ಆಳಕೆ, ಜೊತೆ ಕಾರ್ಯದರ್ಶಿಯಾಗಿ ಶಿವರಾಜ್ ಕುಮಾರ್ ಮಾಲೆಂಗಿರಿ, ಕೋಶಾಧಿಕಾರಿಯಾಗಿ ಕೇಶವ ಗೌಡ ನಡುಬೈಲು ಆಯ್ಕೆಯಾಗಿದ್ದಾರೆ. ಗಿರೀಶ್ ನಡುಬೈಲು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here