ಸುಳ್ಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ

0

 

ಮಳೆ ಮತ್ತು ಜಲ ಸ್ಫೋಟಗಳಿಂದ ಪ್ರಾಕೃತಿಕ ವಿಕೋಪಕ್ಕೊಳಗಾಗಿ ನಿರಾಶ್ರಿತರಾಗಿ ಗೂನಡ್ಕ ಸಜ್ಜನ ಪ್ರತಿಷ್ಠಾನದ ಸಭಾಂಗಣದಲ್ಲಿ ಆಶ್ರಯ ಪಡೆಯುತ್ತಿರುವ ಕುಟುಂಬಗಳಿಗೆ ಮತ್ತು ಅರಂಬೂರು ಭಾಗದ ಎರಡು ಮನೆಗಳಿಗೆ ಸುಳ್ಯ ತಾಲೂಕು ಮೊಬೈಲ್ ರಿಟೇಲರ್ ಅಸೋಸಿಯೇಷನ್ ವತಿಯಿಂದ 30 ಸಾವಿರ ರೂಪಾಯಿಗಳ ಧನ ಸಹಾಯವನ್ನು ಇಂದು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಅಸೋಸಿಯೇಷನ್ ದ. ಕ ಜಿಲ್ಲಾ ಸಮಿತಿ ಅಧ್ಯಕ್ಷ ಶೈಲೇಂದ್ರ ಸರಳಾಯ ಸೃಷ್ಟಿ ಫ್ಯಾನ್ಸಿ,ಹಾಗೂ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಬ್ಬೀರ್ ಓರ್ಕೋಟ್ ಮೊಬೈಲ್ ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು.