ಪಂಜ  :ಚೀಮುಳ್ಳು ನಾರಾಯಣ ಗೌಡರ ಮನೆಯಲ್ಲಿ ಕುಟುಂಬ ಹಬ್ಬ ಆಚರಣೆ

0

 

ವಿಶ್ವ ಅರೆಭಾಷೆ ಹಬ್ಬ ಕೂಡುಕಟ್ಟಿನ ESPEE ಕುಟುಂಬದ ಸದಸ್ಯರು ಸೇರಿ ಪಂಜದ ಚೀಮುಳ್ಳು ನಾರಾಯಣ ಗೌಡರ ಮನೆಯಲ್ಲಿ ಪ್ರಥಮ ವರ್ಷದ ಕುಟುಂಬ ಹಬ್ಬವನ್ನು ಆಚರಿಸಲಾಯಿತು.

ನಾರಾಯಣ ಗೌಡ ಮತ್ತು ತಾರಾ ನಾರಾಯಣರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಮದಾಸ್ ಗೌಡರವರು ಆಟಿ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಎಸ್. ಪಿ.ಲೋಕನಾಥರವರು ಚೆನ್ನಮಣೆ ಆಟ ಆಡುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದರು.ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿವಿಧ ಬಗೆಯ ತಿನಿಸುಗಳು ಕಾರ್ಯಕ್ರಮದಲ್ಲಿದ್ದವು.
ಕು. ಸಾನಿಕಾ ಪ್ರಾರ್ಥಿಸಿದರು. ಸೂರಯ್ಯ ಸೂಂತೋಡು ಪ್ರಸ್ತಾವನೆಗೈದರು.
ಸಮಾರೋಪ ಸಮಾರಂಭದಲ್ಲಿ ಕೂಜುಗೋಡು ಸೋಮಸುಂದರ್ ಅವರು ಬಹುಮಾನ ವಿತರಿಸಿ, ಮಾತನಾಡಿದರು. ಗಿಡಗಳನ್ನು ಬಹುಮಾನವಾಗಿ ನೀಡಲಾಯಿತು.

ದಯಾಪ್ರಸಾದ್ ಚೀಮುಳ್ಳು ಸ್ವಾಗತಿಸಿ, ಶ್ರೀಮತಿ ತುಳಸಿ ದಯಪ್ರಸಾದ್ ಚೀಮುಳ್ಳು ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಎಸ್. ಪಿ. ವಂದಿಸಿದರು.

LEAVE A REPLY

Please enter your comment!
Please enter your name here