ಕುಕ್ಕುಜಡ್ಕ ಮದ್ಯವರ್ಜನ ಶಿಬಿರ – 4 ನೇಯ ದಿನದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ

0

 

ಕುಕ್ಕುಜಡ್ಕ ಚೊಕ್ಕಾಡಿ ಸಹಕಾರಿ ಸಂಘದ ಅಮರ ಸಹಕಾರ ಸದನದಲ್ಲಿ ನಡೆಯುತ್ತಿರುವ 1568 ನೇ ಮದ್ಯವರ್ಜನ ಶಿಬಿರದ ಮಾಹಿತಿ ಕಾರ್ಯಕ್ರಮವು ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು ರವರು ಅಧ್ಯಕ್ಷತೆಯಲ್ಲಿ ಆ.9 ರಂದು ನಡೆಯಿತು.
ಮುಖ್ಯಅತಿಥಿಗಳಾಗಿ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಪಿ.ಸಿ.ಜಯರಾಮ‌ ರವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆ ತೋಟ, ಪ್ರಗತಿಪರ ಕೃಷಿಕ ಆನೆಕಾರ ಗಣಪಯ್ಯ, ಪುತ್ತೂರು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ, ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಪುತ್ತೂರು ಯೋಜನಾಧಿಕಾರಿ ಆನಂದ್, ಸುಳ್ಯ ಜನಜಾಗೃತಿ ವೇದಿಕೆ ಸದಸ್ಯ ಪದ್ಮನಾಭ ಶೆಟ್ಟಿ, ಹರೀಶ್ ರೈ ಉಬರಡ್ಕ,ಚೊಕ್ಕಾಡಿ ಸತ್ಯಸಾಯಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಸಾಯಿಪ್ರಸಾದ್ ಅಜ್ಜನಗದ್ದೆ ಯವರು ಶುಭ ಹಾರೈಸಿದರು.
ಜನಜಾಗೃತಿ ವಲಯಾಧ್ಯಕ್ಷ ರಾಜಾರಾಮ ಭಟ್, ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ವಿಶ್ವನಾಥ ರೈ ಕಳಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೇಲ್ವಿಚಾರಕಿ ವಿಶಾಲ
ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸವಿತಾ ವಂದಿಸಿದರು. ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 61 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here