ನೆರೆ ಪೀಡಿತ ಪ್ರದೇಶಗಳಿಗೆ ಸಣ್ಣ  ನೀರಾವರಿ ಸಚಿವ ಮಾದುಸ್ವಾಮಿ ಭೇಟಿ 

0

 

ಇತ್ತೀಚಿಗೆ ಭಾರಿ ಮಳೆಗೆ ಹಾನಿಯಾದ ಸ್ಥಳಕ್ಕೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾದ ಮಾದುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಪಾಜೆ ಗ್ರಾಮದ, ಕೊಯಿನಾಡು ಕಿಂಡಿ ಅಣೆಕಟ್ಟು ಮತ್ತು ಹಾನಿಗೋಳಗಾದ ಪ್ರದೇಶವನ್ನು ಪರಿಶೀಲಿಸಿದರು.

ವಿರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ, ಮಡಿಕೇರಿ ವಿಧಾನಸಭಾ ಶಾಸಕ ಅಪ್ಪಚ್ಚುರಂಜನ್, ಮಡಿಕೇರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಪಂಚಾಯತ್ ಅಭಿವೃದ್ಧಿಕಾರಿ, ಗ್ರಾಮ ಲೆಕ್ಕಿಗರು, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮೊದಲಾದವರು ಜೊತೆಗಿದ್ದರು.

ನಂತರ ಚೆಂಬು ಗ್ರಾಮದ ಸೇತುವೆ, ಮಾರ್ಪಡ್ಕ ಸೇತುವೆ, ಆನೆಹಳ್ಳದ ಕಿಂಡಿ ಅಣೆಕಟ್ಟನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಎ. ಪಿ. ಎಂ. ಸಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಯ, ಚೆಂಬು ಗ್ರಾ. ಪಂ ಸದಸ್ಯ ತೀರ್ಥರಾಮ ಪೂಜಾರಿಗದ್ದೆ, ಪಯಸ್ವಿನಿ ಬ್ಯಾಂಕ್ ಅಧ್ಯಕ್ಷ ಎನ್. ಸಿ. ಅನಂತ, ಸಂಪಾಜೆ ಗ್ರಾ. ಪಂ ಉಪಾಧ್ಯಕ್ಷ ಜಗದೀಶ್ ಪರಮಲೆ, ಸಂಪಾಜೆ ಗ್ರಾ. ಪಂ ಸದಸ್ಯ ಕುಮಾರ್ ಚೆದ್ಕಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here