ಕಲ್ಮಕಾರಿನ ಕಾಳಜಿ ಕೇಂದ್ರಕ್ಕೆ ಜೆಡಿಎಸ್ ಮುಖಂಡರ ಭೇಟಿ

0

 

ಭಾರಿ ಮಳೆಗೆ ಜಲಪ್ರಳಯದಿಂದ ನಿರಾಶ್ರಿತ ಗೊಂಡಿರುವ ಸಂತ್ರಸ್ತರು ಕಲ್ಮಕಾರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು ಸುಳ್ಯ ಜೆಡಿಎಸ್ ಪಕ್ಷದ ಮುಖಂಡರು ಭೇಟಿ ನೀಡಿ ಸಹಾಯ ಹಸ್ತ ನೀಡಿದ್ದಾರೆ. ಪಕ್ಷದ ಮುಖಂಡರುಗಳಾದ ಎಮ್ ಬಿ ಸದಾಶಿವ್, ರಾಕೇಶ್ ಕುಂಟಿಕಾನ,ಸುಕುಮಾರ್ ಕೋಡ್ತುಗುಳಿ ಮೊದಲಾದವರು ಉಪಸ್ಥಿತರಿದ್ದರು.
ಗಂಜಿ ಕೇಂದ್ರದಲ್ಲಿ ಸುಮಾರು 9 ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದು
ಮುಖಂಡರ ಭೇಟಿ ಮತ್ತು ವಸ್ತ್ರ ವಿತರಣೆ ಕಾರ್ಯಕ್ಕೆ ಕಲ್ಮಕಾರು ಜೆಡಿಎಸ್ ಕಾರ್ಯಕರ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here