ವಾರದ ಬಳಿಕ ಮತ್ತೆ ಹರಿಹರ – ಬಾಳುಗೋಡು ಬಸ್ ಸಂಚಾರ ಆರಂಭ

0

 

ಕಳೆದೊಂದು ವಾರದಿಂದ ಮಳೆ ದುರಂತದಿಂದ ಹರಿಹರ ಬಾಳುಗೋಡು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ಇಂದು ಸಂಜೆ ಸಂಚಾರ ಮತ್ತೆ ಆರಂಭವಾಗಿದೆ.

 

ವಾರ ಪೂರ್ತಿ ಶ್ರಮ ಸೇವೆ ಮತ್ತು ಕಂಟ್ರಾಕ್ಟರ್ ಗಳ ಕೆಲಸದಿಂದ ಮರಳು ಚೀಲಗಳ ತಡೆಗೋಡೆ ನಿರ್ಮಾಣವಾಗಿದ್ದು ಇಂದು ಸಾರ್ವಜನಿಕ ಸಂಚಾರಕ್ಕೆ ರಸ್ತೆ ತೆರೆದುಕೊಂಡಿದೆ. ಕಳೆದೊಂದು ವಾರದಿಂದ ಬಾಳುಗೋಡು, ಬಸವನಗುಡಿ, ಕಿರಿಭಾಗ, ಕೊತ್ನಡ್ಕ, ಉಪ್ಪುಕಳ ಭಾಗಕ್ಕೆ ವಾಹನ ಸೇವೆ ಸ್ಥಗಿತವಾಗಿತ್ತು. ಶಾಲಾ ಬಸ್, ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯೂ ಇಲ್ಲವಾಗಿತ್ತು. ಹಲವರ ನಿರಂತರ ಶ್ರಮದಿಂದ ಸಂಚಾರ ಮತ್ತೆ ಆರಂಭವಾಗಿದೆ.

LEAVE A REPLY

Please enter your comment!
Please enter your name here