ಮದೆನಾಡು ಬಳಿ ಬರೆಯಲ್ಲಿ  ಬೃಹತ್ ಬಿರುಕು

0

 

 

ಸ್ಥಳೀಯರಲ್ಲಿ ಆತಂಕ

ಹೆದ್ದಾರಿ ಸ್ಥಗಿತಗೊಳ್ಳುವ ಭೀತಿ

ಕೊಡಗು ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಮೈಸೂರು- ಮಾಣಿ ರಸ್ತೆಯಲ್ಲಿ ಮದೆನಾಡು ಸಮೀಪ ಗುಡ್ಡದಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಮಳೆಯ ಜೊತೆಯಲ್ಲಿ ಗಾಳಿಯ ಅಬ್ಬರವು ಹೆಚ್ಚಾಗಿದೆ.


ಇದೇ ಸ್ಥಳದಲ್ಲಿ 2018ರಲ್ಲಿ ಮಣ್ಣು ಜರಿದು ರಸ್ತೆ ಬಂದ್ ಆದ ಘಟನೆಯು ನಡೆದಿತ್ತು.
ಇಲ್ಲೇ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳು ಹೆಚ್ಚಾಗಿದ್ದು ಬರೆ ಕುಸಿತ ಉಂಟಾದರೆ ಅನಾಹುತ ಸಂಭವಿಸಬಹುದೆಂದು ಸ್ಥಳೀಯರು ಎಚ್ಚರಿಕೆಯನ್ನು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.