ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಮಾಹಿತಿ ಶಿಬಿರ

0

 

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಮಾಹಿತಿ ಶಿಬಿರ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.


ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಮುರಳೀಧರ್ ರೈ ಅಧ್ಯಕ್ಷತೆ ವಹಿಸಿದ್ದರು.

ಸ್ತ್ರೀರೋಗ ತಜ್ಞೆ ಡಾ.ಗೀತಾ ರವಿಕಾಂತ್ ರವರು ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ರೋಟರಿ ಝೋನ್ 5 ಜೋನಲ್ ಲೆಪ್ಟಿನೆಂಟ್ ರೋ.ಪ್ರೀತಮ್ ಡಿ.ಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಶೈಲಜಾ, ಆರೋಗ್ಯ ಸಹಾಯಕಿ ಕನಕಾಂಬ, ಶಾಲಾ ಅಭಿವೃದ್ಧಿ ಅಧ್ಯಕ್ಷೆ ಸುಜಾತ ಮತ್ತು ಶಿಕ್ಷಕಿ ಶೋಬಾ ಉಪಸ್ಥಿತರಿದ್ದರು.

ಸುಮಾರು 30 ಜನ ತಾಯಂದಿರು ಶಿಬಿರದಲ್ಲಿ ಭಾಗವಹಿಸಿದರು. ಗೌರವ ಉಪಸ್ಥಿತರಾಗಿ ರೋ. ಗುರುವಿಕ್ರಂ ಪ್ರಸಾದ್ ರೋ. ಹೇಮಂತ್ ಕಾಮತ್, ರೋ. ರಾಗೇಶ್ ರಾಘವ್, ರೋ. ಗಿರೀಶ್ ನಾರ್ಕೊಡ್, ರೋ. ಮುಕುಂದ ನಾರ್ಕೋಡ್, ಇನ್ನರ್ ವ್ಹೀಲ್ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಜೆ.ಕೆ ರೈ, ಸದಸ್ಯೆಯರಾದ ಲತಾ ರೈ ಬೂಡು, ಮೀರಾ ಎಂ. ರೈ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸುಳ್ಯ ಸಿಟಿ ಕಾರ್ಯದರ್ಶಿ ರೋ. ಶಿವಪ್ರಸಾದ್ ಕೆ.ವಿ ವಂದಿಸಿದರು.