ಗುತ್ತಿಗಾರಿನಲ್ಲಿ ಗ್ರಂಥಾಲಯ ಪಿತಾಮಹರ ಜನ್ಮದಿನದ ಅಂಗವಾಗಿ ವಿವಿಧ ಸ್ಪರ್ಧೆಗಳು

0

 

 

ಗುತ್ತಿಗಾರು ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಇವರ ಸಹಯೋಗದೊಂದಿಗೆ ಆಗಸ್ಟ್‌ 12 ರಂದು ಜನಿಸಿದ ಗ್ರಂಥಾಲಯ ಪಿತಾಮಹ ಡಾ.ಎಸ್ ಆರ್ ರಂಗನಾಥನ್ ರವರ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಗುತ್ತಿಗಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲಾ ಕಾಲೇಜಿನ ಸುಮಾರು 150 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.


ಗ್ರಂಥಾಲಯದ ಸದುಪಯೋಗದ ಕುರಿತು ಉಪನ್ಯಾಸಕಿ ಸವಿತಾ ಕೂಜುಗೋಡು ಮತ್ತು ಗ್ರಾಮ ಪಂಚಾಯತಿ ಸದಸ್ಯರು ವಿಜಯಕುಮಾರ್ ಮಾತನಾಡಿದರು.
ಕಾರ್ಯಕ್ರಮ ನಿರ್ದೇಶಕರಾದ ಯೋಗೀಶ್ ಹೊಸೊಳಿಕೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮ ನಿರ್ದೇಶಕಿ, ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷ ಮೋಟ್ನೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಸ್ಪರ್ಧಾ ನಿರ್ಣಾಯಕರಾಗಿ ಕೃಷ್ಣ ಪ್ರಸಾದ್ ಕೋಲ್ಚಾರ್, ದಿವ್ಯ ಸುಜನ್ ಗುಡ್ಡೆಮನೆ, ಮಿತ್ರಕುಮಾರಿ ಚಿಕ್ಮುಳಿ, ದೀಕ್ಷಾ ಮಾಡಬಾಕಿಲ, ಕರುಣಾಕರ ಸಾಲ್ತಾಡಿ, ಗೀತಾಶ್ರೀ ಕಲ್ಚಾರ್ ,ಲೀಲಾವತಿ ಅಂಜೇರಿ, ಪ್ರಮೀಳಾ ಎರ್ದಡ್ಕ, ಭಾರತಿ ಸಾಲ್ತಾಡಿ, ಶ್ರೀದೇವಿ ಕೊಂಬೊಟ್ಟು, ಪಂಚಾಯತ್ ಸದಸ್ಯರು, ಶಿಕ್ಷಕರು, ಪೋಷಕರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.