ಸುಣ್ಣಮೂಲೆ: ತಲ್ವಾರ್ ಹಿಡಿದು ನಡೆದಾಡಿದ ಯುವಕ

0

 

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ

ಪೊಲೀಸರ ಭೇಟಿ, ತಲವಾರು ವಶ

ಯುವಕನೋರ್ವ ತಲ್ವಾರ್ ಹಿಡಿದು ರಸ್ತೆ ಬದಿಯಲ್ಲಿ ನಡೆದಾಡಿದ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ನಡೆದಿದೆ.

ಸ್ಥಳೀಯರಾದ ಸಂದೀಪ್ ಎಂಬಾತ ಹೀಗೆ ತಲ್ವಾರ್ ಹಿಡಿದು ನಡೆದಾಡಿದ ವ್ಯಕ್ತಿ.

ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂಬಂಧಪಟ್ಟ ಪೊಲೀಸ್ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿ ಬಂದಿತ್ತು.

ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರುರವರಿಗೆ ಶ್ರದ್ದಾಂಜಲಿ ಕುರಿತ ಬ್ಯಾನರ್ ವಿಚಾರದಲ್ಲಿ ಈತ ಮಾಡಿರುವುದಾಗಿಯೂ,
ಕನಕಮಜಲು ಪೇಟೆಯಲ್ಲಿ ಪ್ಲೆಕ್ಸ್ ಬ್ಯಾನರ್ ಹಾಕಲು ಅನುಮತಿ ಇಲ್ಲ ಎಂದು ಕೋಪಗೊಂಡು ಈತ ತಲ್ವಾರ್ ಹಿಡಿದು ನಡೆದಾಡುತ್ತಿದ್ದಾನೆ ಎಂದು ಪ್ರಚಾರವಾಗಿತ್ತು.

 

ಈ ಬಗ್ಗೆ ಕನಕಮಜಲು ಗ್ರಾಮ ಪಂಚಾಯತಿಯಲ್ಲಿ ಪ್ರಶ್ನಿಸಿದಾಗ ಪ್ಲೆಕ್ಸ್ ಬ್ಯಾನರ್ ಅಳವಡಿಸುವ ವಿಷಯವಾಗಿ ಅನುಮತಿಗಾಗಿ ನಮ್ಮಲ್ಲಿಗೆ ಯಾರೂ ಬಂದಿಲ್ಲ. ಬಟ್ಟೆ ಬ್ಯಾನರ್ ಹಾಕಲು ನಾವು ಅನುಮತಿ ನೀಡಿದ್ದೇವೆ ಎಂದು ಗ್ರಾ.ಪಂ. ಅದ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು “ಸುದ್ದಿ” ಗೆ ತಿಳಿಸಿದ್ದಾರೆ.

 

ಘಟನೆಯ ಗಂಭೀರತೆ ಅರಿತ ಪೊಲೀಸರು ಸ್ಥಳಕ್ಕೆ ಹೋಗಿ ತಲವಾರು ವಶಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.