ನೆಲ್ಲೂರು ಕೆಮ್ರಾಜೆ ಯುವಕ ಮಂಡಲ ನಾರ್ಣಕಜೆ: ನೂತನ ಪದಾಧಿಕಾರಿಗಳ ಆಯ್ಕೆ

0

 

ಅಧ್ಯಕ್ಷರಾಗಿ ಕೌಶಿಕ್ ಸುಳ್ಳಿ, ಕಾರ್ಯದರ್ಶಿಯಾಗಿ ಯೋಗರಾಜ್

ನೆಲ್ಲೂರು ಕೆಮ್ರಾಜೆ ಯುವಕ ಮಂಡಲ ನಾರ್ಣಕಜೆ ಇದರ ಮಹಾಸಭೆ ನಡೆದು 2022-23ನೇ ಸಾಲಿನ ನೂತನ ಆಡಳಿತ ಸಮಿತಿಯ ರಚನೆಯಾಗಿದೆ.

ಗೌರವಾಧ್ಯಕ್ಷರಾಗಿ ಜಯಪ್ರಸಾದ್ ಸುಳ್ಳಿ, ಅಧ್ಯಕ್ಷರಾಗಿ ಕೌಶಿಕ್ ಸುಳ್ಳಿ, ಕಾರ್ಯದರ್ಶಿಯಾಗಿ ಯೋಗರಾಜ ಬಿ., ಜತೆ ಕಾರ್ಯದರ್ಶಿಯಾಗಿ ಸುನಿಲ್ ಕೆ., ಉಪಾಧ್ಯಕ್ಷರಾಗಿ ಹರೀಶ್ ಸುಳ್ಳಿ, ಖಜಾಂಜಿಯಾಗಿ ಸಂತೋಷ್ ಎನ್., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಮಣಿಕಂಠ ಎಂ., ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿರ್ದೇಶ್ ಸುಳ್ಳಿ,
ಕ್ರೀಡಾ ಕಾರ್ಯದರ್ಶಿಯಾಗಿ ಪುನೀತ್ ಬಿ.,
ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಕೇಶವ ಎನ್., ಲೆಕ್ಕ ಪರಿಶೋಧಕರಾಗಿ ಜೈಮಿನಿ ಉಬರಡ್ಕ ಆಯ್ಕೆಯಾಗಿದ್ದಾರೆ.

 

ನಿರ್ದೇಶಕರಾಗಿ ಮುರಳೀಧರ ದಾಸನಕಜೆ, ವಿನೋದ್ ಸುಳ್ಳಿ, ಪ್ರದೀಪ್ ಸುಳ್ಳಿ, ರಾಮಚಂದ್ರ ಎನ್., ಪುರುಷೋತ್ತಮ ಎಸ್., ಯತೀಶ್ ಜಿ., ಅಶೋಕ್ ಸುಳ್ಳಿ ಗುಡ್ಡೆ, ಚಂದ್ರ ದಾಸನಕಜೆ, ಚಂದ್ರಶೇಖರ ನಾರ್ಣಕಜೆ, ವಿಕ್ರಮ್ ನಾರ್ಣಕಜೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here