ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0

 

ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜು ವರ್ಷ ನಗರ ನಿಂತಿಕಲ್ಲು ಇಲ್ಲಿ 2021-22 ನೇ ಶೈಕ್ಷಣಿಕ ವರ್ಷ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆ. 10ರಂದು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಿರಿಶಂಕರ ಸುಲಾಯ ಸವಣೂರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಸಾಧನೆಗೆ ಕೊನೆಯಿಲ್ಲ. ಒಂದು ಸಾಧನೆಯ ನಂತರ ನಾವು ತೃಪ್ತಿ ಪಟ್ಟು ನಿಲ್ಲಿಸಬಾರದು. ಸಾಧನೆ ನಿರಂತರವಾಗಿರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ನಿರ್ದೇಶಕರಾದ ಕುಮಾರ ಸ್ವಾಮಿ ಕೆ.ಎಸ್ ವಹಿಸಿ ವಿದ್ಯಾರ್ಥಿಗಳಿಗೆ ಬದುಕಿನ ಮತ್ತು ಭವಿಷ್ಯದ ನಿರ್ಧಾರ ಗಳನ್ನು ತೆಗೆದು ಕೊಳ್ಳುವಾಗ ಇರಬೇಕಾದ ಎಚ್ಚರಿಕೆ ಗಳ ಬಗ್ಗೆ ತಿಳಿಸಿದರು. ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ರೈ ಪಾದೆಕಲ್ಲು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ನಯನ ಎ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಸಾಧಕರನ್ನು ಪರಿಚಯಿಸಿದರು. ಉಪನ್ಯಾಸಕಿ ಧನ್ಯ ಕೆ.ವಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಜೀವನ್ ಎಸ್.ಎಚ್ ಸ್ವಾಗತಿಸಿ, ಉಪನ್ಯಾಸಕಿ ನಿಶಾ ಬಿ.ಎಸ್ ವಂದಿಸಿದರು. ಉಪನ್ಯಾಸಕಿ ಜಯಶ್ರೀ ಪಿ.ವಿ ಅತಿಥಿಗಳನ್ನು ಪರಿಚಯಿಸಿದರು‌. ಉಪನ್ಯಾಸಕಿಯರಾದ ವೇದಾವತಿ ಎಸ್ ಮತ್ತು ಪ್ರಿಯಾ ಎಂ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಉಪನ್ಯಾಸಕ ಉಜ್ವಲ್ ಕೆ.ಎಚ್ ಕಾರ್ಯಕ್ರಮ ಸಂಘಟಿಸಿದರು.
ವಿದ್ಯಾರ್ಥಿನಿಯರಾದ ಸಾಧನಾ ಶೆಟ್ಟಿ, ಲಿಖಿತಾ ಮತ್ತು ಅನುರಾಧ ಪ್ರಾರ್ಥಿಸಿದರು.