ವಾಲ್ತಾಜೆ ಶಾಲಾ ಯಸ್. ಡಿ. ಯಂ. ಸಿ. ವತಿಯಿಂದ ಧ್ವಜ ಬಳಕೆ ಮಾಹಿತಿ ಮತ್ತು ವಿತರಣೆ

0

 

ದೇವಚಳ್ಳ ಗ್ರಾಮದ ವಾಲ್ತಾಜೆ ಶಾಲಾ ವತಿಯಿಂದ ಯಸ್. ಡಿ. ಯಂ. ಸಿ. ಸದಸ್ಯರುಗಳಿಗೆ, ಅಧ್ಯಾಪಕರುಗಳಿಗೆ, ಅಡುಗೆ ಸಿಬ್ಬಂದಿಗಳಿಗೆ ಧ್ವಜ ವಿತರಣೆ ಮಾಡಲಾಯಿತು.

ಧ್ವಜ ವಿತರಣೆ ಕಾರ್ಯಕ್ರಮವನ್ನು ಶಾಲಾ ಯಸ್. ಡಿ. ಯಂ. ಸಿ. ಅಧ್ಯಕ್ಷ ಚಂದ್ರಶೇಖರ ಕಡೋಡಿ ನಡೆಸಿಕೊಟ್ಟರು. ಧ್ವಜ ಬಳಸುವ ವಿಧಾನ ಮತ್ತು ಕಾನೂನು ಮಾಹಿತಿಯನ್ನು ಶಾಲಾ ಮುಖ್ಯೋಪಾಧ್ಯಾಯ ನಂದನ್ ಕೆ. ಯಸ್. ಅವರು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಗೌರವ ಶಿಕ್ಷಕಿ ವಂದನಾ , ಅಡುಗೆ ಸಿಬ್ಬಂದಿ ಗಿರಿಜಾ ಮಹಾಬಲ ಚಿದ್ಗಲ್, ಯಸ್. ಡಿ. ಯಂ. ಸಿ. ಸದಸ್ಯರುಗಳಾದ ರವೀಂದ್ರ ಕೋಡೊಂಬು, ಪ್ರಶಾಂತ್ ವಾಲ್ತಾಜೆ, ಗೀತಾ ಮಾಡಬಾಕಿಲು, ವಿದ್ಯಾ ಕೊರಂಬಡ್ಕ, ರೇವತಿ ಕೊರತ್ಯಡ್ಕ, ರುಕ್ಮಿಣಿ ಮೀನಾಜೆ ಚಂದ್ರಕಲಾ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.