ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಪುಸ್ತಕ ಬಿಡುಗಡೆ

0

 

ಮಕ್ಕಳ ಕಲ್ಪನೆಗಳನ್ನು ಅರಳಿಸುವ ಕೆಲಸ ನಮ್ಮಿಂದಾಬೇಕು : ಡಾ. ಗಿರೀಶ್ ಭಾರದ್ವಾಜ್

” ಮಕ್ಕಳ ಕಲ್ಪನೆಗಳು ಅದ್ಭುತವಾಗಿ, ಹೃದಯಸ್ಪರ್ಶಿಯಾಗಿರುತ್ತದೆ .ಆ ಕಲ್ಪನೆಗಳನ್ನು ಅರಳಿಸುವ ಕೆಲಸ ಮಾಡಬೇಕು “ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ಹೇಳಿದರು.

ಆ.10ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿ ಸಂದೇಶ್ ಕೆ.ಆರ್ ಇವರು ಪ್ರಕಟಿಸಿದ ‘ಮೌನದಲ್ಲಿ ಅರಳಿದ ಪಕಳೆಗಳು ‘ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅವರ ತಾಯಿ ಸಂಧ್ಯಾಕುಮಾರಿ ವೈ ಇವರು ಮಾತನಾಡಿ “ಪುಟ್ಟ ಸಸಿಯಂತಿರುವ ಮಕ್ಕಳಿಗೆ ನೀರುಣಿಸಿ ಗುರುಗಳು ಆಶೀರ್ವಾದ ನೀಡಿದಾಗ ಮಕ್ಕಳ ಪ್ರತಿಭೆ ಹೊರಬರುವುದು. ನನ್ನ ಮಗನಿಗೆ ಸ್ನೇಹ ಶಾಲೆಯಲ್ಲಿ ಪ್ರೋತ್ಸಾಹ ಸಿಕ್ಕಿದ ಕಾರಣ ಈ ಕೃತಿಯನ್ನು ಹೊರತರಲು ಸಾಧ್ಯವಾಯಿತು . ಎಲ್ಲಾ ಶಾಲೆಗಳಲ್ಲೂ ಪೋಷಕರಿಂದಲೂ ಮಕ್ಕಳಿಗೆ ಪ್ರೋತ್ಸಾಹ ಸಿಗುವಂತಾಗಲಿ” ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ನಿರ್ದೇಶಕರಾಗಿರುವ ಸುಧಾಕರ್ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ, ಸಂಚಾಲಕರಾಗಿರುವ ಡಾ. ವಿದ್ಯಾಶಾಂಭವ ಪಾರೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರು , ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here