ಸೈಂಟ್ ಜೋಸೆಫ್ ಶಾಲೆಯಲ್ಲಿ ಮೊಹರಂ ಹಬ್ಬ ಆಚರಣೆ

0

 

ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಸುಳ್ಯ ಇಲ್ಲಿ ಆ.10 ರಂದು ಮೊಹರಂ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

 

ಕಾರ್ಯಕ್ರಮದಲ್ಲಿ ಶರೀಫ್ ಜಟ್ಟಿಪಳ್ಳರವರು ವಿಶೇಷ ಆಹ್ವಾನಿತರಾಗಿ ಬಂದು ಹಬ್ಬದ ವಿಶೇಷತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಪೋಷಕ ಸಮಿತಿಯ ಅಧ್ಯಕ್ಷ ಹರೀಶ್ ರಾವ್, ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಅಧ್ಯಕ್ಷ ದುರ್ಗಾಪ್ರಸಾದ್, ಪೂರ್ವ ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಅಧ್ಯಕ್ಷೆ ಡಾ. ಅನುರಾಧ ಕುರುಂಜಿ, ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಚೇತನಾ, ಹಾಗೂ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಸ್ಟೆಲ್ಲಾ ಮೇರಿಯವರು ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನೆರವೇರಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ವಿದ್ಯಾರ್ಥಿಗಳಾದ ಕುಮಾರಿ ಐಜಾ ಹಲೀನಾರವರು ಸ್ವಾಗತಿಸಿ, ಕುಮಾರಿ ಆಯಿಷತ್ ಇಫಾರವರು ವಂದಿಸಿದರು. ಕುಮಾರಿ ಮರಿಯಂ ಹುದಾ ನಿರೂಪಿಸಿದರು. ಶಿಕ್ಷಕ ಭಾನುಪ್ರಕಾಶ್‌ರವರು ಸಹಕರಿಸಿರು.