ಆಲೆಟ್ಟಿ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವದ ಪೂರ್ವ ಭಾವಿ ಸಭೆ

0

 

ಹರ್ ಘರ್ ತಿರಂಗಾ ,ಸ್ವಾತಂತ್ರ್ಯದ ಘೋಷಣೆ, ಸ್ವಾತಂತ್ರ್ಯ ನಡಿಗೆಗೆ ಸಿದ್ಧತೆ

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯಲ್ಲಿ ಆ.15 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸುವ ಸಲುವಾಗಿ ಪೂರ್ವ ಭಾವಿ ಸಭೆಯು ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಆ.10 ರಂದು ನಡೆಯಿತು.


ಸ್ವಾತಂತ್ರ್ಯದಿನದಂದು ಬೆಳಗ್ಗೆ ಧ್ವಜಾರೋಹಣದ ಬಳಿಕ ಸ್ವಾತಂತ್ರ್ಯ ದ ನಡಿಗೆಯು ನಾರ್ಕೋಡು ದ್ವಾರದ ವರೆಗೆ ಸ್ವಾತಂತ್ರ್ಯ ಘೋಷಣೆಯೊಂದಿಗೆ ಶಾಲಾ ವಿದ್ಯಾರ್ಥಿಗಳು, ಯುವಕ ಮಂಡಲದ ಸದಸ್ಯರು ಹಾಗೂ ಪಂಚಾಯತ್ ಮತ್ತು ಸಹಕಾರ ಸಂಘದ ಸದಸ್ಯರು, ಗ್ರಾಮದ ನಾಗರಿಕರು ಒಟ್ಟಾಗಿ ಸೇರಿ ಮೆರವಣಿಗೆಯು ನಡೆಯಲಿರುವುದು. ಬಳಿಕ ಆಲೆಟ್ಟಿ ಸೊಸೈಟಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದ್ದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕುಡೆಕಲ್ಲು ಪುಟ್ಟ ಗೌಡ, ‌ಕುಂಚಡ್ಕ ರಾಮ ಗೌಡ, ಕೋಲ್ಚಾರು ಕೂಸಪ್ಪ ಗೌಡ ರವರ ಸವಿನೆನಪಿಗಾಗಿ ಆಲೆಟ್ಟಿ ‌ಗ್ರಾಮದ ಪ್ರಮುಖ ಮೂರು ರಸ್ತೆಗಳಿಗೆ ಇವರುಗಳ ಹೆಸರನ್ನು ಇರಿಸುವ ಬಗ್ಗೆ ತೀರ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವ ಸಲುವಾಗಿ ಪ್ರತಿ ಮನೆಗಳಿಗೆ ರಾಷ್ಟ್ರ ಧ್ವಜ ನೀಡುವಂತೆ ಆಯಾಯ ವಾರ್ಡಿನ ಸದಸ್ಯರಿಗೆ ಜವಬ್ದಾರಿ ವಹಿಸಿಕೊಡಲಾಯಿತು.
ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here