ಜಯಂತ ಮಂಡೆಕೋಲು ನಿಧನ

0
2669

 

ಮಂಡೆಕೋಲು ಗ್ರಾಮದ ಮಂಡೆಕೋಲು ಪೂವಪ್ಪ ಭಂಡಾರಿಯವರ ಪುತ್ರ ಜಯಂತ ಮಂಡೆಕೋಲು ರವರು ತೀವ್ರ ಹೃದಯಾಘಾತದಿಂದ ಇಂದು ಸಂಜೆ ನಿಧನರಾದರು. ಅವರಿಗೆ 42 ವರ್ಷ ಪ್ರಾಯವಾಗಿತ್ತು.


ಎನ್.ಎಂ.ಸಿ.ಯಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕಳೆದ ಆರು ತಿಂಗಳಿಂದ ಕೆಲಸ ಮಾಡುತ್ತಿದ್ದ ಜಯಂತರು ಇಂದು ಸಂಜೆ ಕಾಲೇಜಿನಿಂದ ಮನೆಗೆ ಹಿಂತಿರುಗಿದ ಬಳಿಕ ಮನೆಯಲ್ಲಿ ಸಹೋದರನ ಮಗುವಿನೊಂದಿಗೆ ಆಟವಾಡುತ್ತಿದ್ದಾಗ ದಿಢೀರನೆ ತೀವ್ರ ಹೃದಯಾಘಾತವಾಯಿತೆನ್ನಲಾಗಿದೆ. ಕೂಡಲೇ ಮನೆಯವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಆ ವೇಳೆಗೆ ಜಯಂತ ಕೊನೆಯುಸಿರೆಳೆದಿದ್ದರು.
ಜಯಂತರು ಅವಿವಾಹಿತರಾಗಿದ್ದು, ತಾಯಿ, ಸಹೋದರ, ಸಹೋದರಿ, ಅತ್ತಿಗೆ ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here